

ಮೈಸೂರು: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ಪಂಚ ಮಹಾ ರಥೋತ್ಸವ ಬುಧವಾರ ಬೆಳಗಿನಜಾವ ಅದ್ದೂರಿಯಾಗಿ ನೆರವೇರಿತು. ಎರಡು ವರ್ಷಗಳ ಬಳಿಕ ನಂಜನಗೂಡಿನಲ್ಲಿ ಬೃಹತ್ ಜಾತ್ರೆ ಸಡಗರ ಕಳೆಗಟ್ಟಿತ್ತು.
ಬೆಳಗಿನಜಾವ ನಾಲ್ಕು ಗಂಟೆಗೆ ಶುಭ ಮಕರ ಲಗ್ನದಲ್ಲಿ ನಡೆದ ಪಂಚ ಮಹಾ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು. ದೊಡ್ಡ ತೇರಿನಲ್ಲಿ ಶ್ರೀಕಂಠೇಶ್ವರ ವಿರಾಜಮಾನವಾಗಿದ್ದ ದೃಶ್ಯ ನೋಡಿ ಭಕ್ತರು ಜಯಘೋಷ ಮೊಳಗಿಸಿದರು. ನಂಜುಂಡನ ಪರಿವಾರವಾದ ಪಾರ್ವತಿದೇವಿ, ಗಣಪತಿ, ಷಣ್ಮುಗ, ಚಂಡಿಕೇಶ್ವರ ಕೂಡ ರಥಾರೂಢರಾಗಿದ್ದರು. ಶಾಸಕ ಹರ್ಷವರ್ಧನ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.