ಕುಸ್ತಿ ತಾರೆಯರಲ್ಲಿ ಒಡಕು? ವಿನೇಶ್​ ಪೋಗಟ್​ ವಿರುದ್ಧ ತಿರುಗಿಬಿದ್ದ ಸಾಕ್ಷಿ ಮಲಿಕ್​!

web wre
Published on

ನವದೆಹಲಿ: ದೇಶದ ಪ್ರಮುಖ ಕುಸ್ತಿಪಟುಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿನೇಶ್​ ಪೋಗಟ್​ ಮತ್ತು ಸಾಕ್ಷಿ ಮಲಿಕ್​ ನಡುವೆ ಇದೀಗ ಬಿರುಕು ಮೂಡಿದೆ. ಕಾಂಗ್ರೆಸ್​ ಸೇರಿ ಶಾಸಕಿಯಾಗಿರುವ ವಿನೇಶ್​ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಸಾಕ್ಷಿ ಮಲಿಕ್​ ತಿರುಗಿಬಿದ್ದಿದ್ದಾರೆ.

ಕಳೆದ ವರ್ಷ ಏಷ್ಯನ್​ ಗೇಮ್ಸ್​ಗೆ ಟ್ರಯಲ್ಸ್​ ವಿನಾಯಿತಿ ಒಪ್ಪಿಕೊಳ್ಳುವ ಮೂಲಕ ವಿನೇಶ್​ ಮತ್ತು ಭಜರಂಗ್​ ಪೂನಿಯಾ ತಮ್ಮ ಪ್ರತಿಭಟನೆಯನ್ನು ದುರ್ಬಲಗೊಳಿಸಿದರು. ಅವರದು ಸ್ವಾರ್ಥ ನಿರ್ಧಾರವಾಗಿತ್ತು. ಜತೆಗಿದ್ದವರೇ ಅವರ ತಲೆಯಲ್ಲಿ ಸ್ವಾರ್ಥವನ್ನು ತುಂಬಿದರು. ಇದರಿಂದಾಗಿ ನಮ್ಮ ಪ್ರತಿಭಟನೆ ಸ್ವಾರ್ಥ ಸಾಧನೆಗಾಗಿ ನಡೆಯುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಲಾರಂಭಿಸಿತು ಎಂದು ರಿಯೋ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ತನ್ನ ಪುಸ್ತಕ "ವಿಟ್ನೆಸ್​'ನಲ್ಲಿ ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿನೇಶ್​, ಸಾಯದ್ದು ವೈಯಕ್ತಿಕ ಅಭಿಪ್ರಾಯ, ಅದನ್ನು ನಾನು ಒಪ್ಪುವುದಿಲ್ಲ. ನಮ್ಮ ಹೋರಾಟ ಯಾವತ್ತೂ ದುರ್ಬಲವಾಗಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net