More

  ಜೂ.17ಕ್ಕೆ ಅಚಿಂತ್ಯ ನೃತ್ಯ ಪ್ರದರ್ಶನ; ವಿದುಷಿ ದೀಕ್ಷಾ ಕುಮಾರ್ ವಿಭಿನ್ನ ಪ್ರಯತ್ನ

  ಬೆಂಗಳೂರು: ಜೂ.17ಕ್ಕೆ ದೊಮ್ಮಲೂರಿನ ಬಿಐಸಿ ಸಭಾಂಗಣದಲ್ಲಿ ‘ಅಚಿಂತ್ಯ’ ವಿಶೇಷ ನೃತ್ಯ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದುಷಿ ದೀಕ್ಷಾ ಕುಮಾರ್ ನೃತ್ಯ ಪ್ರದರ್ಶನ ನಡೆಸಿಕೊಡಲಿದ್ದಾರೆ.

  ಅಚಿಂತ್ಯ ಇದು ಏಕವ್ಯಕ್ತಿ ನೃತ್ಯ ಪ್ರದರ್ಶನವಾಗಿದ್ದು, ಸತ್ಯದ ಪರಿಕಲ್ಪನೆಯ ಹುಡುಕಾಟವನ್ನು ವೀಕ್ಷಕರ ಮುಂದೆ ನೃತ್ಯರೂಪದಲ್ಲಿ ತೆರೆದಿಡುವ ಪ್ರಯತ್ನ. ಕರ್ನಾಟಕದಲ್ಲಿನ ಮಹತ್ವದ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಅಂಶಗಳನ್ನು ಒಳಗೊಂಡ ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯವರ ವಚನಗಳು ಹಾಗೂ ದ.ರಾ.ಬೇಂದ್ರೆಯವರ ಅಚಿಂತ್ಯ ಕವನವನ್ನು ಭರತನಾಟ್ಯಕ್ಕೆ ಸಂಯೋಜಿಸಲಾಗಿದೆ.

  ಪಂಡಿತ್ ಪ್ರವೀಣ್ ಡಿ. ರಾವ್ ಸಂಗೀತ ಸಂಯೋಜಿಸಿದ್ದು, ವೇಣುಗೋಪಾಲ್ ಗಾಯನ ಮತ್ತು ಕೊಳಲುವಾದನ ನೀಡಲಿದ್ದಾರೆ. ಪ್ರಮತ್ ಕಿರಣ್ ತಾಳವಾದ್ಯಗಳನ್ನು ನಿರ್ವಹಿಸಲಿದ್ದು, ಶ್ರುತಿ ಕಾಮತ್ ಸಿಥಾರ್ ವಾದನ ನುಡಿಸಲಿದ್ದಾರೆ. ಕೀರ್ತಿಕುಮಾರ್ ಬೆಳಕು ಸಂಯೋಜನೆ ಹಾಗೂ ಜಯಾ ಫೌಂಡೆನಷನ್ ನಿರ್ಮಾಣದಲ್ಲಿ ಕಾರ್ಯಕ್ರಮ ಮೂಡಿಬರಲಿದೆ.

  See also  ಸಂಗೀತ-ನೃತ್ಯ ಅಭ್ಯಾಸದಿಂದ ಮಾನಸಿಕ ದೃಢತೆ, ಜೀವನಶ್ರದ್ಧೆ ಹೆಚ್ಚಳ; ಕಲೆಗಳೂ ಕಲಿಕೆಯ ಅಂಗವಾಗಲಿ: ಎಚ್​ಎಸ್​​ವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts