ಹೀರೋಗಳ ಹುಟ್ಟುಹಬ್ಬಕ್ಕೆ ಚಿತ್ರತಂಡದವರು ಬಗೆಬಗೆಯ ಕೇಕ್ಗಳನ್ನು ಮಾಡಿಸುವುದು ಸಹಜ. ಗಣೇಶ್ ಅವರ ಹುಟ್ಟುಹಬ್ಬಕ್ಕೆ ನಿರ್ದೇಶಕ ಪ್ರಶಾಂತ್ ರಾಜ್ ಅವರು ಸಿನಿಮಾ ಕೇಕ್ ಮಾಡಿಸಿದ್ದಾರೆ. ಗಣೇಶ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಅನೌನ್ಸ್ ಮಾಡಿರುವ ಪ್ರಶಾಂತ್ ರಾಜ್, ವಿಶೇಷ ಕೇಕ್ ಮೂಲಕ ಗಣೇಶ್ ಹುಟ್ಟುಹಬ್ಬ ಆಚರಿಸಿದ್ದಾರೆ. ಒಬ್ಬ ಹೀರೋ, ಲೈಟ್ಸ್, ಕ್ಯಾಮೆರಾ, ಕ್ಲಾಪ್ಬೋರ್ಡ್ … ಇರುವ ಈ ಕೇಕ್ನ್ನು ಗಣೇಶ್ ಅವರ ಹುಟ್ಟುಹಬ್ಬಕ್ಕೆಂದೇ ವಿಶೇಷವಾಗಿ ಈ ಮಾಡಿಸಲಾಗಿದೆ. ಇಂದು ಬೆಳಿಗ್ಗೆ, ವಿಶೇಷ ಕೇಕ್ನೊಂದಿಗೆ ಪ್ರಶಾಂತ್ ರಾಜ್ ಮತ್ತು ತಂಡ, ಗಣೇಶ್ ಅವರ ಮನೆಗೆ ಹೋಗಿ, ಗಣೇಶ್ ಅವರಿಂದ ಕೇಕ್ ಕಟ್ ಮಾಡಿಸಿ, ಸರಳವಾಗಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ಹುಟ್ಟುಹಬ್ಬದ ಫೋಟೋಗಳು ನಿಮಗಾಗಿ …