ಒಂದೂವರೆ ಸಾವಿರ ರೂಪಾಯಿಗಾಗಿ ಅಪ್ಪನನ್ನೇ ಕೊಂದ ಮಗ

son
Published on

ತುಮಕೂರು: ಗುಬ್ಬಿ ತಾಲೂಕಿನ ಕಡಬ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಗನಿಂದಲೇ ತಂದೆಯ ಬರ್ಬರ ಹತ್ಯೆಯಾಗಿದ್ದು, ಸಾವ್ರಜನಿಕರು ಬೆಚ್ಚಿಬಿದ್ದಿದ್ದಾರೆ.

ರೇಣುಕಯ್ಯ(65) ಕೊಲೆಯಾದ ಮೃತ ದುರ್ದೈವಿ. ತಂದೆಯನ್ನ ಹತ್ಯೆ ಮಾಡಿದ ಮಗ ರಮೇಶ (31) ಎಂದು ಗುರುತಿಸಲಾಗಿದೆ.

ಅಡಿಕೆ ಎಲೆ ಮಾರಿ ಬಂದಿದ್ದ ಒಂದೂವರೆ ಸಾವಿರ ರೂ.ಹಣದ ವಿಚಾರಕ್ಕೆ ಶುರುವಾದ ಜಗಳ ತಂದೆ ಕೊಲೆಯಲ್ಲಿ ಅಂತ್ಯವಾಗಿದೆ. ರಮೇಶ ಭಾನುವಾರ ಬೆಳಗ್ಗೆ ಅಡಿಕೆ ಎಲೆ ಮಾರಿದ್ದರು. ಇದರಿಂದ ಬಂದ ಒಂದೂವರೆ ಸಾವಿರ ರೂ.ಗಳನ್ನು ತಂದೆ ರೇಣುಕಯ್ಯ ಕೊಡುವಂತೆ ಕೇಳಿದ್ದರು. ಆದರೆ ಮಗ ಹಣ ಕೊಡಲು ಒಪ್ಪದಿದ್ದಾಗ ಇದೇ ವಿಚಾರವಾಗಿ ತಂದೆ ಮಗನ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

ಕುಡಿದ ಮತ್ತಿನಲ್ಲಿದ್ದ ರಮೇಶ ಮಚ್ಚಿನಿಂದ ತಂದೆ ರೇಣುಕಯ್ಯ ಮೇಲೆ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ರೇಣುಕಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ನಡೆದಿರುವ ಘಟನೆ ನಡೆನಡೆದಿದ್ದು, ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಆರೋಪಿ ರಮೇಶನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net