

ಮಧ್ಯಪ್ರದೇಶ: ( Snake ) ರಸ್ತೆ ಅಪಘಾತದಲ್ಲಿ ಗಂಡು ಹಾವು ಸಾವನ್ನಪ್ಪಿದ್ದು, ಹೆಣ್ಣು ಹಾವೊಂದು ಸತ್ತ ಹಾವಿನ ಪಕ್ಕದಲ್ಲಿ 24 ಗಂಟೆಗಳ ಕಾಲ ಇದ್ದು ದುಃಖ ವ್ಯಕ್ತಪಡಿಸಿತು. ಈ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.
ನಡೆದಿದ್ದೇನು?:
ರಸ್ತೆಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು ಗಂಡು ಹಾವು ಸಾವನ್ನಪ್ಪಿದೆ. ಗ್ರಾಮಸ್ಥರು ಗಂಡು ಹಾವನ್ನು ರಸ್ತೆಯ ಬದಿಯಲ್ಲಿ ಇರಿಸಿದಾಗ, ಸ್ವಲ್ಪ ಸಮಯದ ನಂತರ ಅಲ್ಲಿಗೆ ಬಂದ ಹೆಣ್ಣು ಹಾವು ಅಲ್ಲಿಯೇ ಇದ್ದು ತನ್ನ ದುಃಖವನ್ನು ವ್ಯಕ್ತಪಡಿಸಿತು. ಗಂಡು ಹಾವನ್ನು ಯಾವುದೇ ಚಲನೆಯಿಲ್ಲದೆ ನೋಡುತ್ತಾ ಅದು ಅಪಾರ ದುಃಖದಲ್ಲಿ ಮುಳುಗಿತ್ತು.
ಪಕ್ಕದಲ್ಲಿ ಸುಮಾರು 24 ಗಂಟೆಗಳ ಕಾಲ ಇದ್ದು ಕೊನೆಗೆ ಹೆಣ್ಣು ಹಾವು ಕೂಡ ಇಹಲೋಕ ತ್ಯಜಿಸಿತು. ಈ ಹೃದಯವಿದ್ರಾವಕ ಘಟನೆಯನ್ನು ಕಂಡ ಎಲ್ಲಾ ಗ್ರಾಮಸ್ಥರು ತೀವ್ರ ಭಾವುಕರಾಗಿದ್ದರು. ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಗಳನ್ನು ನಡೆಸಲಾಯಿತು.
ಸನಾತನ ಧರ್ಮದಲ್ಲಿ ಹಾವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಗ್ರಾಮಸ್ಥರು ಆ ಸ್ಥಳದಲ್ಲಿ ಒಂದು ವೇದಿಕೆಯನ್ನು ನಿರ್ಮಿಸಲು ನಿರ್ಧರಿಸಿದರು. ಅದು ಅವರ ಪ್ರೀತಿಯ ಸಂಕೇತವಾಗಿ ಉಳಿಯುತ್ತದೆ ಎಂದು ಹೇಳಲಾಗುತ್ತಿದೆ.