ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ: ಅಂತಿಮ ಯಾತ್ರೆ ವೇಳೆ ಬೈಕ್​ಗೆ ಬೆಂಕಿ, ಮನೆಗಳಿಗೆ ಕಲ್ಲು ತೂರಾಟ

shimoga harsha
Published on

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ ಹರ್ಷನ ಹತ್ಯೆ ಬಳಿಕ ನಗರದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದ್ದು, ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮೆಗ್ಗಾನ್​ ಆಸ್ಪತ್ರೆಯಿಂದ ಹರ್ಷನ ಮನೆ ಬಳಿಗೆ ಮೃತದೇಹ ತರಲಾಗಿದ್ದು, ಅಂತಿಮ ಯಾತ್ರೆ ಮೆರವಣಿಗೆ ವೇಳೆ ಉದ್ರಿಕ್ತರ ಗುಂಪು ಬೈಕ್​ಗೆ ಬೆಂಕಿ ಹಚ್ಚಿ, ಕಾರುಗಳ ಗಾಜನ್ನು ಪುಡಿಪುಡಿ ಮಾಡಿದೆ.

ಹರ್ಷ ಕೊಲೆಯಾದ ಬಳಿಕ ನಗರದ ಸೀಗೆಹಟ್ಟಿ, ಕಲ್ಲಪ್ಪನ ಕೇರಿ, ರವಿವರ್ಮ ಬೀದಿ, ಕ್ಲಾರ್ಕ್ ಪೇಟೆ ಒಳಗೊಂಡಂತೆ ಅರ್ಧ ಹಳೇ ಶಿವಮೊಗ್ಗ ಭಾಗ ಬೂದಿ‌ಮುಚ್ಚಿದ ಕೆಂಡಂತಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಿಂದ ಸೀಗೆಹಟ್ಟಿಯ ನಿವಾಸಕ್ಕೆ ಸಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಅತ್ತ ಓಟಿ ರಸ್ತೆಯಲ್ಲಿ ಅಂತಿಮ ಯಾತ್ರೆ ನಡೆಸುವಾಗ ಉದ್ರಿಕ್ತರು ಬೈಕ್​ಗೆ ಬೆಂಕಿ ಹಚ್ಚಿ, ಕಾರುಗಳು ಮತ್ತು ಮನೆಗಳಿಗೆ ಕಲ್ಲು ತೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net