ನಂದಿ ಬೆಟ್ಟಕ್ಕೆ ಶಕ್ತಿಧಾಮ ಮಕ್ಕಳ ಪ್ರವಾಸ: ಶಿವರಾಜ್​ಕುಮಾರ್​ ಜತೆ ಅಪ್ಪು ನೆನೆಯುತ್ತಲೇ ಹೆಜ್ಜೆ ಇಟ್ಟ ಮಕ್ಕಳು

nandi hill shakthidhama
Published on

ಚಿಕ್ಕಬಳ್ಳಾಪುರ: ಮೈಸೂರಿನ ಶಕ್ತಿಧಾಮದ 150 ಮಕ್ಕಳು ನಂದಿಬೆಟ್ಟಕ್ಕೆ ಪ್ರವಾಸ ಬಂದಿದ್ದು, ಮಕ್ಕಳೊಂದಿಗೆ ನಟ ಶಿವರಾಜ್​ಕುಮಾರ್​ ದಂಪತಿ ಕೆಲ ಸಮಯ ಕಳೆದರು.

ನಂದಿ ಬೆಟ್ಟ ನೋಡಬೇಕೆಂದು ಶಕ್ತಿಧಾಮದ ಮಕ್ಕಳಿ ಆಸೆ ವ್ಯಕ್ತಪಡಿಸಿದ ಹಿನ್ನೆಲೆ ಗುರುವಾರ ಅವರನ್ನು ಇಲ್ಲಿಗೆ ಕರೆತರಲಾಯಿತು. ನಂದಿ ಬೆಟ್ಟದ ಪ್ರಾಕೃತಿಕ ಸೊಬಗು ಕಂಡು ಬೆರಗಾದ ಮಕ್ಕಳು ಖುಷಿಯಿಂದಲೇ ಹೆಜ್ಜೆ ಇಟ್ಟರು. ನಂದಿಯ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ದೇವರ ದರ್ಶನದ ನಂತರ ಮಕ್ಕಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ತಿಂಡಿ ತಿನ್ನುವ ವೇಳೆ ಗೀತಾ ಶಿವರಾಜ್​ಕುಮಾರ್​ ಮಕ್ಕಳು ಸಿಹಿ ತಿನ್ನಿಸಿ ಸಂತಸ ಪಟ್ಟರು. ಅಪ್ಪು ಅಭಿನಯದ 'ರಾಜಕುಮಾರ' ಸಿನಿಮಾದ ಹಾಡು ಹಾಡುತ್ತಾ ಮಕ್ಕಳು ಹೆಜ್ಜೆ ಇಡುತ್ತಿದ್ದ ದೃಶ್ಯ ನೋಡುಗರನ್ನ ಭಾವುಕರನ್ನಾಗಿಸಿತು.

ತಂದೆ-ತಾಯಿ ಸ್ಥಾಪಿಸಿದ ತಾಯಿಬೇರಿನ ಸಂಸ್ಥೆಯಾದ ಶಕ್ತಿಧಾಮದ ಮಕ್ಕಳೊಂದಿಗೆ ಕಾಲ ಕಳೆಯುವ ಸಂತೋಷ ವಿಭಿನ್ನ. ಪುನೀತ್ ಇಲ್ಲದ ನೋವು ಯಾವುತ್ತೂ ಹೋಗಲ್ಲ. ಅದರಲ್ಲೇ ನಾವೇ ಬದುಕುಬೇಕು. ಅಪ್ಪುನಾ ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ನಮ್ಮ ತಂದೆ-ತಾಯಿ ಹಾಗೂ ಕೆಂಪಯ್ಯನವರು ಆರಂಭಿಸಿದ ಸಂಸ್ಥೆ ಶಕ್ತಿಧಾಮ. ಸಾಕಷ್ಟು ಟ್ರಸ್ಟಿಗಳು ಸೇರಿ ಆರಂಭ ಮಾಡಿದ ಸಂಸ್ಥೆ. ಶಕ್ತಿಧಾಮ ಸಂಸ್ಥೆಯಲ್ಲಿ 150 ಮಕ್ಕಳಿದ್ದಾರೆ. ಈ ವರ್ಷ 200 ಮಕ್ಕಳು ಆಗಲಿದ್ದಾರೆ. ಅವರಿಗೆ ಊಟ, ವಸತಿ, ಶಾಲೆ ಎಲ್ಲ ಜವಾಬ್ದಾರಿ ನಮ್ಮದು. ಪ್ರವಾಸಿತಾಣಗಳ ಬಗ್ಗೆ ಮಾಹಿತಿ ಇರಲಿ ಅಂತ ಪ್ರವಾಸ ಕೈಗೊಂಡಿದ್ದೇವೆ ಎಂದು ಶಿವರಾಜ್​ಕುಮಾರ್​ ಹೇಳಿದರು.

ಪುನೀತ್​ ರಾಜ್​ಕುಮಾರ್​ ಮನೆಗೆ ನಟ ಅಲ್ಲು ಅರ್ಜುನ್ ಭೇಟಿ ಹಿನ್ನೆಲೆ ನಂದಿಗ್ರಾಮದಿಂದ ಬೆಂಗಳೂರಿಗೆ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net