ಕಾರಂತರ ಕೃತಿಗಳ ಪುನರ್ ಅವಲೋಕನದ ಅಗತ್ಯ

mng_15 oct karantha
ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಭಾಷಾ ವಿಭಾಗ ಮತ್ತು ಸಾಹಿತ್ಯ ಸಂಘಗಳ ಸಹಯೋಗದಲ್ಲಿ ನಡೆದ ಡಾ. ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿದರು.
Published on

ಮಂಗಳೂರು: ಸೃಜನಶೀಲಾತ್ಮಕ ಶಿಕ್ಷಣ ಕ್ರಮಕ್ಕೆ ಪ್ರಾಶಸ್ತ್ಯ ನೀಡಿದ್ದ ಶಿವರಾಮ ಕಾರಂತರು ತಮ್ಮ ಬರವಣಿಗೆಗಳಿಂದ ಸ್ಪೂರ್ತಿ ನೀಡಿದವರು. ಪ್ರಸ್ತುತ ಕಾಲಘಟ್ಟದಲ್ಲಿ ಕಾರಂತರ ಕೃತಿಗಳ ಪುನರ್ ಅವಲೋಕನದ ಅಗತ್ಯವಿದೆ ಎಂದು ಗೋವಿಂದ ದಾಸ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಹೇಳಿದರು.

ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ, ಭಾಷಾ ವಿಭಾಗ ಮತ್ತು ಸಾಹಿತ್ಯ ಸಂಘಗಳ ಸಹಯೋಗದಲ್ಲಿ ನಡೆದ ಡಾ. ಕೆ. ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ವಿಭಾಗ ಮುಖ್ಯಸ್ಥ ಡಾ. ಸಂತೋಷ ಆಳ್ವ ಮತ್ತು ಉಪನ್ಯಾಸಕ ಕಿಟ್ಟು ಕೆ. ಕಾರಂತರ ಚೋಮನ ದುಡಿ ಮತ್ತು ಸರಸಮ್ಮನ ಸಮಾಧಿ ಕೃತಿಗಳ ವಿಮರ್ಶೆ ನಡೆಸಿದರು. ಕಾರಂತರ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕಾಲೇಜಿನ ಗ್ರಂಥಾಲಯದಲ್ಲಿ ಡಾ. ಶಿವರಾಮ ಕಾರಂತರ ಸಮಗ್ರ ಕೃತಿಗಳ ಪ್ರದರ್ಶನ ನಡೆಯಿತು.

ಉಪ ಪ್ರಾಂಶುಪಾಲ ಪ್ರೊ. ನೀಲಪ್ಪ ವಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಉಪನ್ಯಾಸಕಿ ಅಕ್ಷತಾ ವಿ. ಮತ್ತಿತ್ತರರು ಉಪಸ್ಥಿತರಿದ್ದರು. ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net