More

  PSI ನೇಮಕಾತಿ ಹಗರಣ: ಹಣ ಕೊಟ್ಟಾತನಿಗೆ ಶಾಸಕರಿಂದ ನಿಂದನೆ? ಮತ್ತೊಂದು ಆಡಿಯೋ ವೈರಲ್​

  ಕೊಪ್ಪಳ: ಪಿಎಸ್​ಐ ಹುದ್ದೆ ನೇಮಕಾತಿ ಹಗರಣದಲ್ಲಿ 15 ಲಕ್ಷ ರೂ. ಪಡೆದ ವಿಚಾರ ಆಡಿಯೋ ಮೂಲಕ ವೈರಲ್​ ಆದ ಬೆನ್ನಲ್ಲೇ ಶಾಸಕ ಬಸವರಾಜ ದಢೇಸುಗೂರು, ಹಣ ನೀಡಿದಾತಗೆ ನಿಂದಿಸಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಮಂಗಳವಾರ ಹೊರಬಂದಿದೆ.

  ಹಣ ನೀಡಿದ್ದ ಕುರಿತು ಹಾಗೂ ವಿಷಯವನ್ನು ಮಾಧ್ಯಮಗಳಿಗೆ ಬಹಿರಂಗ ಪಡಿಸುವ ಸಂಬಂಧ ಹಣ ನೀಡಿದಾತನಿಗೆ ಧಮ್ಕಿ ಹಾಕುತ್ತಿರುವ ಸಂಭಾಷಣೆ ಆಡಿಯೋದಲ್ಲಿದೆ. “ನೀನಾಗಿಯೇ ಬಂದು ಹಣ ನೀಡಿದ್ದೀಯ. ನಾನೇನು ದುಡ್ಡು ನೀಡುವಂತೆ ನಿನ್ನನ್ನು ಕೇಳಿರಲಿಲ್ಲ. ಹಣವನ್ನು ನಾನು ತಿಂದಿಲ್ಲ. ಹೀಗಿದ್ದರೂ ಮರಳಿ ಕೊಡಿಸುವುದಾಗಿ ತಿಳಿಸಿರುವೆ. ಆದರೆ, ನನ್ನ ವಿರುದ್ಧವೇ ಸುದ್ದಿಗೋಷ್ಠಿ ನಡೆಸುವೆಯಾ? ಯಾರನ್ನು ಕರೆತಂದರೂ ನಡೆಯುವುದಿಲ್ಲ. ಅದು ಯಾರು ಬರುತ್ತಾರೆ ನೋಡೋಣ” ಎಂದು ಆವಾಚ್ಯವಾಗಿ ನಿಂದಿಸಲಾಗಿದೆ.

  ಈಗಾಗಲೇ ಪಿಎಸ್​ಐ ನೇಮಕಾತಿಗಾಗಿ ಹಣ ಪಡೆದ ಆಡಿಯೋದಲ್ಲಿನ ಧ್ವನಿ ತಮ್ಮದೇ ಎಂದು ಹೇಳಿಕೆ ನೀಡುವ ಮೂಲಕ ಶಾಸಕ ದಢೇಸುಗೂರು ಮುಜುಗರಕ್ಕೆ ಈಡಾಗಿದ್ದಾರೆ. ಸದ್ಯ ಪ್ರಕರಣವನ್ನು ಮುಚ್ಚಿ ಹಾಕುವ ಭರದಲ್ಲಿ ಶಾಸಕರು ಮತ್ತೊಂದು ಎಡವಟ್ಟು ಮಾಡಿಕೊಂಡರಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

  ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರ್ತಿದ್ದ ಗಂಡ… ಇದೇ ವಿಚಾರಕ್ಕೆ ನಡೀತು ಘೋರ ದುರಂತ

  3 ದಿನದ ಬದಲು 1 ದಿನದ ಶೋಕಾಚರಣೆಗೆ ಸಿದ್ದರಾಮಯ್ಯ ಬೇಸರ: ನಾಳೆ ನಡೆಯುತ್ತಾ ಜನೋತ್ಸವ?

  ಮಳೆಯಿಂದ ಮಂಡ್ಯದಲ್ಲಿ ಬಯಲಾಯ್ತು ಭಯಾನಕ ರಹಸ್ಯ! ಸ್ನಾನದ ಕೋಣೆಯಲ್ಲಿ ಸುರಂಗ… ಮಾಲೀಕನಿಗೆ ಕಾದಿತ್ತು ಶಾಕ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts