ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕ ಪ್ರಕಟ: ಪ್ರಧಾನಿ ಮೋದಿ ಮತ್ತೊಮ್ಮೆ ನಂ.1

Narendra Modi 7 March 20
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಮಾನ್ಯತೆಯ ಶ್ರೇಯಾಂಕದಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿದ್ದಾರೆ. ಮೋದಿ ಅವರು ಶೇ. 75 ಅನುಮೋದನೆಯೊಂದಿಗೆ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಮಾರ್ನಿಂಗ್​ ಕನ್ಸಲ್ಟ್​ ಸಮೀಕ್ಷೆ ತಿಳಿಸಿದೆ.

ಮೆಕ್ಸಿಕೊದ ಅಧ್ಯಕ್ಷ ಆಂಡ್ರೆಸ್​ ಮ್ಯಾನುಯೆಲ್​ ಲೋಪೇಜ್​ ಒಬ್ರಡಾರ್​ ಮತ್ತು ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಕ್ರಮವಾಗಿ ಶೇ.63 ಮತ್ತು ಶೇ. 54 ರೇಟಿಂಗ್​ಗಳೊಂದಿಗೆ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 32 ವಿಶ್ವ ನಾಯಕರ ಹೆಸರನ್ನು ಒಳಗೊಂಡಿರುವ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಶೇ.41 ರೇಟಿಂಗ್​ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಕೆನಡಾ ಅಧ್ಯಕ್ಷ ಜಸ್ಟಿನ್​ ಟ್ರುಡೊ ಶೇ.30, ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿಡಾ ಶೇ.38ರಷ್ಟು ರೇಟಿಂಗ್​ ಪಡೆದಿದ್ದಾರೆ. 2022ರ ಜನವರಿ ಮತ್ತು 2021ರ ನವೆಂಬರ್​ನಲ್ಲಿ ನಡೆದ ಸಮೀಕ್ಷೆಯಲ್ಲೂ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ವಿಶ್ವನಾಯಕರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರು.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇಯನ್ನು ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು 7 ದಿನಗಳ ಕಾಲ ಸಂಗ್ರಹಿಸಿದ ಅಂಕಿ-ಅಂಶಗಳನ್ನು ಆಧರಿಸಿ ಈ ಫಲಿತಾಂಶ ಪ್ರಕಟಿಸಿದೆ.

ಏನಿದು ಮಾರ್ನಿಂಗ್​ ಕನ್ಸಲ್ಟ್​?: ಅಮೆರಿಕದ ಮಾನಿಂಗ್​ ಕನ್ಸಲ್ಟ್​ ಪೊಲಿಟಿಕಲ್​ ಇಂಟೆಲಿಜೆನ್ಸ್​ ಸಂಸ್ಥೆಯು ಪ್ರಸ್ತುತ ಆಸ್ಟ್ರೆಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೊ, ನೆದರ್ಲೆಂಡ್​, ದಣ ಕೊರಿಯಾ, ಸ್ಪೇನ್​, ಸ್ವೀಡನ್​ ಮತ್ತು ಅಮೆರಿಕದಲ್ಲಿ ಆಯಾಯ ದೇಶಗಳ ನಾಯಕರ ಅನುಮೋದನೆ ರೇಟಿಂಗ್​ಗಳನ್ನು ಟ್ರ್ಯಾಕ್​ ಮಾಡುವ ಕೆಲಸ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net