More

    ರೈಲ್ವೇ ನಿಲ್ದಾಣದಲ್ಲಿ ಗಂಡನೆದುರೇ ಗರ್ಭಿಣಿ ಮಹಿಳೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ!

    ಹೈದರಾಬಾದ್​: ರಾತ್ರಿ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ರೈಲು ಕಾಯುತ್ತಿದ್ದ ಗರ್ಭಿಣಿ ಮಹಿಳೆಯನ್ನು ಹೊತ್ತೊಯ್ದ ಮೂವರು ಸಾಮೂಹಿಕ ಅತ್ಯಾಚಾರವೆಸಗಿರುವ ಹೀನಕೃತ್ಯ ಬಯಲಾಗಿದೆ.

    ಆಂದ್ರಪ್ರದೇಶದ ಬಪಾಟ್ಲಾ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಗರ್ಭಿಣಿ ಮಹಿಳೆ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ರೈಲು ಕಾಯುತ್ತಿದ್ದರು. ಈ ವೇಳೆ ಬಂದ ಮೂವರು, ಗಂಡ ಹಾಗೂ ಮಕ್ಕಳನ್ನು ಥಳಿಸಿ, ಮಹಿಳೆಯನ್ನು ಹೊತ್ತೊಯ್ದಿದ್ದಾರೆ. ಕೂಡಲೇ ರೈಲ್ವೇ ಪೊಲೀಸರಿಗೆ ಮಾಹಿತಿ ಮುಟ್ಟಿಸುವ ವೇಳೆಗೆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆರೋಪಿಗಳು ಪರಾರಿಯಾಗಿದ್ದರು.

    ರೈಲ್ವೇ ನಿಲ್ದಾಣದ ಸಮೀಪದಲ್ಲೇ ಮಹಿಳೆಯನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.

    ಶನಿವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಈ ಕುಟುಂಬ ಕೃಷ್ಣ ಜಿಲ್ಲೆಯಿಂದ ಗುಂಟೂರಿಗೆ ತಲುಪುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts