More

    ವಿಲ್ ಯಂಗ್ ಶತಕದ ಅಬ್ಬರ: ಬಾಂಗ್ಲಾ ಎದುರು ಕಿವೀಸ್‌ಗೆ ಜಯಭೇರಿ

    ಡುನೆಡಿನ್: ಬ್ಯಾಟರ್ ವಿಲ್ ಯಂಗ್ (105 ರನ್, 84 ಎಸೆತ, 14 ಬೌಂಡರಿ, 4 ಸಿಕ್ಸರ್) ಬಿರುಸಿನ ಶತಕ ಹಾಗೂ ನಾಯಕ ಟಾಮ್ ಲಾಥಮ್ (92 ರನ್, 77 ಎಸೆತ, 9 ಬೌಂಡರಿ, 3 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಮಳೆಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಡಿಎಲ್‌ಎಸ್ ನಿಯಮದನ್ವಯ 44 ರನ್‌ಗಳಿಂದ ಗೆಲುವು ದಾಖಲಿಸಿದೆ.

    ಭಾನುವಾರ ನಡೆದ ಪಂದ್ಯವನ್ನು ಮಳೆಯಿಂದಾಗಿ 30 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕಿವೀಸ್, 30 ಓವರ್‌ಗಳಲ್ಲಿ 7 ವಿಕೆಟ್‌ಗೆ 239 ರನ್‌ಗಳಿಸಿತು. ಪ್ರತಿಯಾಗಿ 244 ರನ್‌ಗಳ ಗುರಿ ಪಡೆದ ಬಾಂಗ್ಲಾ, 30 ಓವರ್‌ಗಳಲ್ಲಿ 9 ವಿಕೆಟ್‌ಗೆ 200 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕಿವೀಸ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಕಿವೀಸ್: 7 ವಿಕೆಟ್‌ಗೆ 239 (ವಿಲ್ ಯಂಗ್ 105, ರಚಿನ್ 0,ಲಾಥಮ್ 92, ಚಾಪ್‌ಮನ್ 20, ಶೋರಿುಲ್ 28ಕ್ಕೆ2).
    ಬಾಂಗ್ಲಾ: 9 ವಿಕೆಟ್‌ಗೆ 200 (ಅನಾಮುಲ್ 43, ಲಿಟನ್ 22, ತೌಹಿದ್ 33, ಅಫೀಪ್ 38, ಮೆಹಿದಿ 28, ಸೋಧಿ 35ಕ್ಕೆ2, ಕ್ಲಾರ್ಕ್‌ಸನ್ 24ಕ್ಕೆ2). ಪಂದ್ಯಶ್ರೇಷ್ಠ: ವಿಲ್ ಯಂಗ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts