ಕರೊನಾ ಲಸಿಕೆ ಕಥೆ ಎಲ್ಲಿಗೆ ಬಂತು? ಇಲ್ಲಿ ನೋಡಿ ತಿಳಿದುಕೊಳ್ಳಿ..

corona-china
Published on

ನವದೆಹಲಿ: ಸದ್ಯ ಈಗ ಜಗತ್ತಿನಾದ್ಯಂತ ಇರುವ ಕುತೂಹಲ ಒಂದೇ.. ಅದು ಕರೊನಾ ಲಸಿಕೆ ಕುರಿತಾದದ್ದು. ಕೋವಿಡ್​ 19 ವ್ಯಾಕ್ಸಿನ್​ ಯಾರು ಕಂಡು ಹಿಡಿಯುತ್ತಾರೆ, ಯಾವಾಗ ಕಂಡು ಹಿಡಿಯುತ್ತಾರೆ ಎಂಬುದನ್ನು ಜಗತ್ತೇ ಕೌತುಕದಿಂದ ನೋಡುತ್ತಿದೆ.

ಅದಕ್ಕೆ ಪೂರಕವಾಗಿ ಭಾರತವೂ ಸೇರಿ ಜಗತ್ತಿನ ಹಲವೆಡೆ ಆ ಕುರಿತ ಸಂಶೋಧನೆಗಳು, ಟ್ರಯಲ್​ಗಳು ಕೂಡ ನಡೆಯುತ್ತಿವೆ. ಕರೊನಾ ಲಸಿಕೆ ಸಂಶೋಧನೆ ಸಂಬಂಧದ ಬೆಳವಣಿಗೆಗಳನ್ನು ಜನರು ಬಹಳ ನಿರೀಕ್ಷೆಯಿಂದ ಗಮನಿಸುತ್ತಿದ್ದಾರೆ. ಹೀಗಾಗಿ ಅದನ್ನು ಜನರಿಗೆ ನೀಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಅಭಿಪ್ರಾಯ ಪಟ್ಟಿದ್ದಾರೆ.

ಹೀಗಾಗಿ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ, ಅಪ್​ಡೇಟ್​ಗಳನ್ನು ಒಳಗೊಂಡ ಪೋರ್ಟಲ್​ವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದಲ್ಲಿ ಮಾತ್ರವಲ್ಲ ಜಾಗತಿಕವಾಗಿ ನಡೆಯುತ್ತಿರುವ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ ನಿಯಮಿತವಾಗಿ ಈ ವೆಬ್​ಸೈಟ್​ನಲ್ಲಿ ಲಭಿಸಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ಪೋರ್ಟಲ್​ ವಿಳಾಸ ಹೀಗಿದೆ.. https://vaccine.icmr.org.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net