ಕೆಲಸಕ್ಕೆ ತೆರಳಿದ್ದವನಿಗೆ ರೈಲು ಬಡಿದು ಸಾವು

1hnr2- CRIME
Published on

ಹೊನ್ನಾವರ: ಪಟ್ಟಣದ ಕೆಳಗಿನಪಾಳ್ಯ ಸಮೀಪ ಬಿಕಾಸಿತಾರಿ ರೈಲ್ವೆ ಟನೇಲ್ ಬಳಿ ರೈಲು ಬಡಿದು ಹಡಿನಬಾಳ ಹುಡಗೋಡದ ಧರ್ಮ ಶಂಭು ನಾಯ್ಕ (52) ಮೃತಪಟ್ಟಿದ್ದಾರೆ.


ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಶನಿವಾರ ಮಧ್ಯಾಹ್ನ ಹೋಗಿದ್ದರು. ರೈಲ್ವೆ ಹಳಿಯ ಮೇಲೆ ಮೃತದೇಹ ಪತ್ತೆಯಾಗಿದೆ. ಮರಘಟತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು. ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net