ಲಕ್ಷ ಲಕ್ಷ ದುಡಿತೀರಿ, ನಮ್ಗೆ ಕೊಡೋಕೇನು? ಎಂದು ಲಂಚಕ್ಕಾಗಿ ಪೀಡಿಸುತ್ತಿದ್ದ ಪಿಎಸ್​ಐ ರತ್ನಯ್ಯಗೆ ಕೊನೆಗೂ ಆಯ್ತು ಶಿಕ್ಷೆ

psi ratnayya (2)
Published on

ಬಾಗೇಪಲ್ಲಿ: ಲಕ್ಷ ಲಕ್ಷ ದುಡಿತೀರಿ, ಅದ್ರಲ್ಲಿ ಸ್ವಲ್ಪ ನಮ್ಗೆ ಕೊಡೋಕೇನು? ಹಣ ಕೊಟ್ರೆ ಕೆಲ್ಸ, ಇಲ್ಲದಿದ್ರೆ ಕೇಸ್​ ಹಾಕ್ತೀವಿ ಎಂದು ಜನರಿಗೆ ಬೆದರಿಕೆ ಹಾಕಿ ಹಣಕ್ಕಾಕಿ ಪೀಡಿಸುತ್ತಿದ್ದ ಪಿಎಸ್​ಐ ರತ್ನಯ್ಯಗೆ ಕೊನೆಗೂ ಅಮಾನತು ಶಿಕ್ಷೆ ಆಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಪಾತಪಾಳ್ಯ ಠಾಣೆಯ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ರತ್ನಯ್ಯ ಕೆಲಸದಿಂದ ಅಮಾನತುಗೊಂಡವ. ಇವರು ನಾಲ್ಕೈದು ಕಡೆ ಲಂಚಕ್ಕಾಗಿ ಜನರನ್ನು ಪೀಡಿಸಿದ್ದ ಸಂದರ್ಭದಲ್ಲಿ ಸಂತ್ರಸ್ತರು ಆಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅವಾಜ್​ ಹಾಕುವ, ಕಡಿಮೆ ಹಣಕ್ಕೆ ಕಿಡಿಕಾರಿರುವ, ನಾಗರಿಕರಿಗೆ ಕಿರುಕುಳ ನೀಡಿದ್ದಾರೆ ಎನ್ನುವುದು ಆಡಿಯೋದಲ್ಲಿದೆ. ರತ್ನಯ್ಯನ ಕಾರ್ಯವೈಖರಿಗೆ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿತ್ತು. ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಚಿಕ್ಕಬಳ್ಳಾಪುರ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರು ರತ್ನಯ್ಯನನ್ನು ಕೆಲಸದಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net