ರೈಲು ಹತ್ತುವಾಗ ಕಾಲು ಜಾರಿದ ಪ್ರಯಾಣಿಕ: ತಪ್ಪಿದ ಭಾರೀ ಅನಾಹುತ! |Railway

TRAIN
Published on

Railway: ಮುಂಬೈನ ಕಿಂಗ್​ ಸರ್ಕಲ್​ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಚಲಿಸುವ ರೈಲನ್ನು ಹತ್ತುವಾಗ ಆಯತಪ್ಪಿದ್ದು, ಅಲ್ಲಿನ ಸಿಬ್ಬಂದಿ ಆತನನ್ನು ರಕ್ಷಿಸಿದ ಘಟನೆ ಮಂಗಳವಾರ ರಾತ್ರಿ (ಆ.05) ನಡೆದಿದೆ.

ವಡಾಲಾ ರೈಲ್ವೆ ಪೊಲೀಸರ ಪ್ರಕಾರ, ರಾತ್ರಿ 11:50 ರ ಸುಮಾರಿಗೆ ಛತ್ರಪತಿ ಶಿವಾಜಿ ಟರ್ಮಿನಲ್​ನಿಂದ ಚಲಿಸುತ್ತಿದ್ದ ಸ್ಥಳೀಯ ರೈಲು ಕಿಂಗ್​ ಸರ್ಕಲ್​ ರೈಲ್ವೆ ನಿಲ್ದಾಣಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಇನ್ನು ಪ್ಲಾಟ್​ಫಾರ್ಮನಲ್ಲಿ ಜನದಟ್ಟಣೆ ಇಲ್ಲದಿದ್ದರೂ ಪ್ರಯಾಣಿಕ ಚಲಿಸುವ ರೈಲು ಹತ್ತುವಾಗ ಕಾಲು ಜಾರಿದ್ದಾನೆ. ಇನ್ನು ಈ ವ್ಯಕ್ತಿ ರೈಲಿನಿಂದ ಬೀಳುವುದನ್ನು ಗಮನಿಸಿದ ಕರ್ತವ್ಯನಿರತ ವಡಾಲಾ ಪೊಲೀಸ್​ ಠಾಣೆಯ ಕಾನ್​ಸ್ಟೇಬಲ್​ ತಕ್ಷಣವೇ ಪ್ರಯಾಣಿಕನ್ನು ಎಳೆದುಕೊಂಡು ಆತನನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಒಂದು ಸೆಕೆಂಡ್​ ತಡಮಾಡಿದ್ದರೆ, ಆ ವ್ಯಕ್ತಿ ರೈಲು ಹಾಗೂ ಪ್ಲಾಟ್​ಫಾರ್ಮ್​ ನಡುವೆ ಬೀಳುವ ಸಾಧ್ಯತೆ ಇತ್ತು. ನಮ್ಮ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಿ, ಆತನ ಜೀವವನ್ನು ಕಾಪಾಡಿದ್ದಾರೆ. ರೈಲು ಹತ್ತುವಾಗ ಆತುರಪಡಬೇಡಿ ಮತ್ತು ನಿಮ್ಮ ಸ್ವಂತ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಹಿರಿಯ ಅಧಿಕಾರಿ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net