ಅಬ್ಬಬ್ಬಾ! ಬರೋಬ್ಬರಿ 61 ಗಂಟೆ ನಿರಂತರವಾಗಿ ಟ್ರ್ಯಾಕ್ಟರ್​ ಮೂಲಕ ನೇಗಿಲು ಹೊಡೆದ ಚಾಲಕ

tractor
Published on

ನಿಡಗುಂದಿ(ವಿಜಯಪುರ): ತಾಲೂಕಿನ ಹೆಬ್ಬಾಳದ ಚಾಲಕ ಹೊಳೆಬಸಪ್ಪ ಸಾತಪ್ಪ ಮನಹಳ್ಳಿ 61 ಗಂಟೆ ನಿರಂತರ ಟ್ರ್ಯಾಕ್ಟರ್​ ಮೂಲಕ ನೇಗಿಲು ಹೊಡೆದು ಗಮನ ಸೆಳೆದಿದ್ದಾರೆ.

ಗ್ರಾಮದ ಚನ್ನನಗೌಡ ಪಾಟೀಲರ 28 ಎಕರೆ ಜಮೀನು, ಈರಪ್ಪ ಹೊರ್ತಿ ಅವರ 5 ಎಕರೆ ಜಮೀನು ಹಾಗೂ ಸೋಮಪ್ಪ ಹಚಡದ ಅವರ 3 ಎಕರೆ ಸೇರಿ ಒಟ್ಟು 36 ಎಕರೆ ಜಮೀನನ್ನು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಬುಧವಾರ ಸಂಜೆ 7.30ರವರೆಗೆ ನಿರಂತರ ನೇಗಿಲು ಹೊಡೆದಿದ್ದಾರೆ. ಎಳನೀರು, ಅಲ್ಪೋಪಾಹಾರ ಸೇವನೆ ಮತ್ತು ಮಲಮೂತ್ರ ವಿಸರ್ಜನೆಗೆಂದು ಎರಡ್ಮೂರು ಬಾರಿ ಕೆಲ ನಿಮಿಷ ಟ್ರ್ಯಾಕ್ಟರ್​​ ನಿಲ್ಲಿಸಿದ್ದನ್ನು ಹೊರತುಪಡಿಸಿ ನಿರಂತರ ಟ್ರ್ಯಾಕ್ಟರ್​ ಚಲಾಯಿಸಿ ಸಾಹಸ ಪ್ರದಶಿರ್ಸಿದ್ದಾರೆ.

10 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿಯ ಕಡಗ: ಹೊಳೆಬಸಪ್ಪನ ವಿಶಿಷ್ಟ ಸಾಧನೆ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಅವರನ್ನು ಅಭಿನಂದಿಸಿದರು. ಹಲಗೆ ಬಾರಿಸುತ್ತ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. 10 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿ ಕಡಗ, ಬಟ್ಟೆ ನೀಡಿ ಅವರ ಸಾಧನೆಗೆ ಪ್ರೋತ್ಸಾಹ ನೀಡಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net