More

    ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

    ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು.

    ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ ಅವರಿಗೆ ಮೂರು ಮಕ್ಕಳಿದ್ದರು. ಮೂವರು ಮಕ್ಕಳ ವಯಸ್ಸು ಬೇರೆಯಾದರೂ ಒಂದೇ ತಿಂಗಳಲ್ಲಿ ಜನಿಸಿದ್ದರು. ಮಕ್ಕಳಾದ ಅರ್ಚ, ಶ್ರೀಭದ್ರ ಮತ್ತು ಅಭಿನವ್​ ಜನವರಿಯಲ್ಲಿ ಜನಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸಲು ನೇಪಾಳ ಪ್ರವಾಸಕ್ಕೆ ತೆರಳಿದ್ದರು.

    ಜನವರಿ 3ರಂದು ಶ್ರೀಭದ್ರ, 15ರಂದು ಅಭಿನವ್​ ಮತ್ತು 31ರಂದು ಅರ್ಚ ಹುಟ್ಟುಹಬ್ಬ ಆಚರಣೆ ಇತ್ತು. ಕಿರಿಯ ಮಗ ಅಭಿನವ್ ಎಲಮಕ್ಕರದಲ್ಲಿರುವ ಸರಸ್ವತಿ ವಿದ್ಯಾನಿಕೇತನದಲ್ಲಿ​​ ಎಲ್​ಕೆಜಿ ವಿದ್ಯಾರ್ಥಿಯಾಗಿದ್ದ. ಇದೀಗ ಅಭಿನವ್​ ಇಲ್ಲ ಎನ್ನುವ ಸುದ್ದಿ ಕೇಳಿ ಕ್ಲಾಸ್ ಟೀಚರ್​ ಆದ ಹೆಥಾಲ್​ ಮತ್ತು ಶ್ರೀಭದ್ರ ಅವರು ಆಘಾತಕ್ಕೆ ಒಳಗಾಗಿದ್ದಾರೆ.

    ಇನ್ನು ಶ್ರೀಭದ್ರ ಕಳೆದ ಗುರುವಾರ ಶಾಲೆಯಿಂದ ಮನೆಗೆ ಮರಳಲು ತುಂಬಾ ಉತ್ಸುಕಳಾಗಿದ್ದಳು. ನಮ್ಮ ತಂದೆ ಮನೆಗೆ ಬಂದಿದ್ದಾರೆ. ನಾವು ನೇಪಾಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಒಂದು ವಾರದ ಬಳಿಕ ಊರಿಗೆ ಮರಳುತ್ತೇವೆ ಎಂದು ಹೇಳಿ ಹೋಗಿದ್ದಳು. ಆದರೆ, ಮತ್ತೆ ಮರಳಿದ್ದು ಶವವಾಗಿ.

    ಪ್ರತಿದಿನವು ಮಕ್ಕಳನ್ನು ಅವರ ತಾತ ಶಾಲೆ ಬಿಡುತ್ತಿದ್ದರು. ಆದರೆ ಕಳೆದ ಗುರುವಾರ ತಂದೆ ಪ್ರವೀಣ್​ ತಾವೇ ಖುದ್ದಾಗಿ ಮಕ್ಕಳನ್ನು ಶಾಲೆಗೆ ಬಿಟ್ಟು, ಪ್ರವಾಸದ ಬಗ್ಗೆ ಮಾಹಿತಿ ನೀಡಿ ರಜೆಯ ಬಗ್ಗೆ ತಿಳಿಸಿದ್ದರು. ಅದರಂತೆ ಹುಟ್ಟು ಸಂಭ್ರಮಾಚರಣೆಗೆ ನೇಪಾಳಕ್ಕೆ ಬಂದಿದ್ದರು. ಆದರೆ ನೇಪಾಳದಲ್ಲಿ ಆಗಿದ್ದೇ ಬೇರೆ.

    ನೇಪಾಳದ ಹೋಟೆಲ್​ವೊಂದರಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ರೂಮಿನೊಳಗೆ ಇಡಲಾಗಿದ್ದ ಔಟ್​ಡೋರ್​ ಹೀಟರ್​ನ ವಿಷಕಾರಿ ಕಾರ್ಬನ್​ ಮೊನಾಕ್ಸೈಡ್​ ಪರಿಣಾಮದಿಂದ ದುರ್ಘಟನೆ ಸಂಭವಿಸಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಸದ್ಯ ಪ್ರವಾಸೋದ್ಯಮ ಇಲಾಖೆ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts