ಲಯನ್ಸ್ ಹ್ಯಾಟ್ರಿಕ್ ಘರ್ಜನೆ: ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್‌ಗೆ ಸೋಲು

sll
Published on

ಬೆಂಗಳೂರು: ನಾಯಕ ಶ್ರೇಯಸ್ ಗೋಪಾಲ್ (52 ರನ್, 37 ಎಸೆತ, 4 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುವ ಅರ್ಧಶತಕ ಹಾಗೂ ಕೊನೆಯಲ್ಲಿ ಎಚ್‌ಎಸ್ ಶರತ್ (31 ರನ್, 11 ಎಸೆತ, 2 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ತಂಡ 2ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಗುಲ್ಬರ್ಗಾ ಮಿಸ್ಟಿಕ್ಸ್ ಎದುರು 3 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಶ್ರೇಯಸ್ ಗೋಪಾಲ್ ಬಳಗ ಸತತ 3ನೇ ಪಂದ್ಯದಲ್ಲಿ ಅಜೇಯವಾಗಿ ಉಳಿದಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಲ್ಬರ್ಗಾ ತಂಡ ಆರಂಭಿಕ ಆದರ್ಶ್ ಪ್ರಜ್ವಲ್ (43) ಹಾಗೂ ಆರ್. ಸ್ಮರಣ್ (40) ಉಪಯುಕ್ತ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 175 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ 4.3 ಓವರ್‌ಗಳಲ್ಲಿ 39 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶಿವಮೊಗ್ಗ ತಂಡ, ಅಂತಿಮವಾಗಿ 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 179 ರನ್‌ಗಳಿಸಿ ಜಯದ ಸಂಭ್ರಮ ಕಂಡಿತು. ಆರನೇ ವಿಕೆಟ್‌ಗೆ ಜತೆಯಾದ ಶ್ರೇಯಸ್ ಗೋಪಾಲ್ ಮತ್ತು ಅಭಿನವ್ ಮನೋಹರ್ (28) 71 ರನ್ ಸೇರಿಸಿ ಲಯನ್ಸ್ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯ 3 ಓವರ್‌ಗಳಲ್ಲಿ 36 ರನ್ ಅಗತ್ಯವಿದ್ದಾಗ ಎಚ್‌ಎಸ್ ಶರತ್ ಏಕಾಂಗಿಯಾಗಿ 31 ರನ್ ಬಾರಿಸಿ ಸಿಕ್ಸರ್ ಮೂಲಕ ಗೆಲುವು ಸಾರಿದರು.

ಗುಲ್ಬರ್ಗಾ ಮಿಸ್ಟಿಕ್ಸ್ : 6 ವಿಕೆಟ್‌ಗೆ 175 (ಎಲ್‌ಆರ್ ಚೇತನ್ 43,ಎ. ಪ್ರಜ್ವಲ್ 43, ಸ್ಮರಣ್ 40, ಮ್ಯಾಕ್ನೀಲ್ 16, ಅಮಿತ್ ವರ್ಮ 10, ಎಸ್ ಶರತ್ 22*, ವಿ. ಕೌಶಿಕ್ 47ಕ್ಕೆ1, ಕ್ರಾಂತಿ ಕುಮಾರ್ 17ಕ್ಕೆ3, ಶ್ರೇಯಸ್ 29ಕ್ಕೆ1).

ಶಿವಮೊಗ್ಗ ಲಯನ್ಸ್: 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 179 (ರೋಹನ್ ಕದಂ 12, ನಿಹಾಲ್ 4, ಶ್ರೇಯಸ್ ಗೋಪಾಲ್ 52, ಅಭಿನವ್ 28, ಶಿವರಾಜ್ 27*, ಎಚ್‌ಎಸ್ ಶರತ್ 31*, ವೈಶಾಕ್ 25ಕ್ಕೆ2, ಅಭಿಲಾಷ್ 45ಕ್ಕೆ2).

ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್.

ನಾಳೆಯ ಪಂದ್ಯಗಳು

ಶಿವಮೊಗ್ಗ ಲಯನ್ಸ್- ಮೈಸೂರು ವಾರಿಯರ್ಸ್‌

ಆರಂಭ: ಮಧ್ಯಾಹ್ನ 1ಕ್ಕೆ

ಮಂಗಳೂರು ಡ್ರ್ಯಾಗನ್ಸ್ - ಬೆಂಗಳೂರು ಬ್ಲಾಸ್ಟರ್ಸ್‌

ಆರಂಭ: ಸಂಜೆ 5.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ/2.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net