

ಮೈಸೂರು: ತನ್ನ ತಾಯಿ ಸತ್ತ ದಿದ ಈ ಬದುಕೇ ಸಾಕೆನಿಸಿ ವಿಷ ಕುಡಿದಿದ್ದ ಯುವಕ ಬದುಕಿದ. ಇದಾದ ಕೆಲ ವರ್ಷದಲ್ಲಿ ತಂದೆ ಮೃತಪಟ್ಟರು. ಆ ದಿನವೂ ಸಾಯಲೇ ಬೇಕೆಂದು ನಿರ್ಧರಿಸಿ ಚಲಿಸುತ್ತಿದ್ದ ರೈಲಿಂದ ಕೆಳಗೆ ಜಿಗಿದಿದ್ದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದ. ಎರಡು ಬಾರಿಯೂ ಸಾವಿನ ಮನೆಯ ಕದತಟ್ಟಿ ವಾಪಸ್ ಬಂದಿದ್ದವ ನಿನ್ನೆ(ಗುರವಾರ) ದುರಂತ ಅಂತ್ಯ ಕಂಡಿದ್ದಾನೆ.
ಇಂತಹ ಘಟನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಸಂಭವಿಸಿದೆ. ಎಸ್.ಕಾರ್ತಿಕ್ (30) ಮೃತ ದುರ್ದೈವಿ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎನ್.ಆರ್.ಮೊಹಲ್ಲಾದಲ್ಲಿ ವಾಸವಿದ್ದ.
ಕಾರ್ತಿಕ್ ತಾಯಿ ಡಾ.ಪಾರ್ವತಿ ಕೆಲ ವರ್ಷಗಳ ಹಿಂದೆಷ್ಟೇ ಸಾವನ್ನಪ್ಪಿದ್ದರು. ನಂತರ ತಂದೆ ಶಿವಲಿಂಗಯ್ಯ ಕೂಡ ಮೃತಪಟ್ಟಿದ್ದರು. ಚಿಕ್ಕಮ್ಮನ ಆಸರೆಯಲ್ಲಿದ್ದ ಕಾರ್ತಿಕ್, ಇತ್ತೀಚಿಗೆ ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂ ಮಾಡಿಕೊಂಡು ವಾಸವಾಗಿದ್ದ.
ತಾಯಿ ಸಾವನ್ನಪ್ಪಿದ ದಿನವೇ ಕಾರ್ತಿಕ್ ವಿಷ ಸೇವಿಸಿದ್ದ. ಅಷ್ಟೇ ಅಲ್ಲನ ತಂದೆ ಸತ್ ದಿನ ರೈಲಿನಿಂದ ಕೆಳಗೆ ಜಿಗಿದಿದ್ದ. ಅದೃಷ್ಟವಶಾತ್ ಈ ಎರಡು ಬಾರಿಯೂ ಅಪಾಯದಿಂದ ಪಾರಾಗಿದ್ದ. ಪೋಷಕರ ಅಗಲಿಕೆಯಿಂದ ತೀವ್ರವಾಗಿ ಮನನೊಂದ ಕಾರ್ತಿಕ್, ಮೂರನೇ ಬಾರಿಗೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಹುಟ್ಟು ಹಬ್ಬದ ದಿನವೇ ಮೃತಪಟ್ಟಿದ್ದಾನೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.