ಗಂಡನ ಮನೆಯವರ ಕಿರುಕುಳ ತಾಳದೇ 2ವರ್ಷದ ಮಗುವಿನೊಂದಿಗೆ ಬಾವಿಗೆ ಜಿಗಿದು ತಾಯಿ ಆತ್ಮಹತ್ಯೆ

Crime
Published on

ಕಲಬುರಗಿ: ಗಂಡನ‌ ಮನೆಯವರ ಕಿರುಕುಳ ತಾಳದೆ ಎರಡು ವರ್ಷದ ಮಗುವಿನೊಂದಿಗೆ ತಾಯಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಜಿಲ್ಲೆಯ ಚಿಂಚೋಳಿ ಹೊರ ವಲಯದಲ್ಲಿ ನಡೆದಿದೆ.

ಚಂದಾಪುರ ಗಂಗೂನಾಯಕ ತಾಂಡಾದ ನಿವಾಸಿ ಕವಿತಾಬಾಯಿ (23) ಹಾಗೂ ಪುತ್ರ (2) ಆತ್ಮಹತ್ಯೆಗೆ ಶರಣಾದವರು.

ಕೆಲ ವರ್ಷಗಳ ಹಿಂದೆ ಚಂದಾಪುರದ ಸುರೇಶ ಶಂಕ್ರಪ್ಪ ಅವರು ಕವಿತಾ ಅವಳನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದು ಅಂತರ ಜಾತಿ ವಿವಾಹವಾಗಿತ್ತು. ಪ್ರತಿದಿನ ಕವಿತಾಬಾಯಿಗೆ ಗಂಡ ಹಾಗೂ ಗಂಡನ ಮನೆಯವರು ಕಿರುಕುಳ‌ ನೀಡುತ್ತಿದ್ದರು. ಇದರಿಂದಾಗಿ ಬೇಸತ್ತು ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕವಿತಾಬಾಯಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಾವಿಯಿಂದ ತಾಯಿ ಮತ್ತು ಮಗನ ಶವ ಹೊರ ತೆಗೆಯಲಾಗಿದ್ದು, ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಚಿಂಚೋಳಿ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net