ಆಜಾನ್​ಗೆ ​ಪ್ರತಿಯಾಗಿ ರಾಮತಾರಕ ಮಂತ್ರ: ಬೆಳ್ಳಂಬೆಳಗ್ಗೆ ರಾಮನಾಮ ಮೊಳಗಿಸಿದ ಕಾಳಿ ಮಠದ ಸ್ವಾಮೀಜಿ

New Project(36)
Published on

ಹಾಸನ: ರಾಜ್ಯದಲ್ಲಿ ಹಲಾಲ್​ ಕಟ್​, ಜಟ್ಕಾ ಕಟ್​ ವಿವಾದದ ಬೆನ್ನಲ್ಲೇ ಇನ್ನೊಂದು ಹೊಸ ಅಭಿಯಾನ ಶುರುವಾಗಿದೆ. ಮುಸ್ಲಿಂ ಸಮುದಾಯದವರು ನಮಾಜ್​ ಮಾಡಿ, ಅಲ್ಲಾ ಹು ಅಕ್ಬರ್​ ಎಂದು ಕೂಗುವ ವೇಳೆಗೆ ದೇವಾಲಯಗಳಲ್ಲಿ ಜೈ ಶ್ರೀರಾಮ್​ ಎಂದು ಕೂಗಿಸುವ ಅಭಿಯಾನಕ್ಕೆ ಮಂಗಳವಾರ ಮುಂಜಾನೆ 5.30ಕ್ಕೆ ಅರಸೀಕೆರೆಯಲ್ಲಿ ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಚಾಲನೆ ನೀಡಿದರು. ಧ್ವನಿವರ್ಧಕ ಮೂಲಕ ರಾಮತಾರಕ ಮಂತ್ರ ಪಠಿಸಿದರು.

ಕಾನೂನು ಎಲ್ಲರಿಗೂ ಒಂದೇ: ಅವರು ಅಲ್ಲನನ್ನು ರಾಗದಿಂದಲೇ ಕೂಗುತ್ತಾರೆ. ನಾವೂ ಅದೇ ರೀತಿ ಶ್ರೀರಾಮನನ್ನು ರಾಗದಿಂದಲೇ 5 ಬಾರಿ ಕೂಗಿದ್ದೇನೆ. ಇದನ್ನು ಯಾರೂ ತಡೆಯಬಾರದು. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ರಿಷಿಕುಮಾರ ಸ್ವಾಮೀಜಿ ಹೇಳಿದರು.

ರಾಜ್ಯಾದ್ಯಂತ ಈ ಅಭಿಯಾನ ವಿಸ್ತರಿಸಲು ಚಿಂತಿಸಲಾಗಿದೆ. ದೇವಸ್ಥಾನಗಳಲ್ಲಿ ಪ್ರತಿದಿನ 5 ಗಂಟೆಗೆ ರಾಮಭಜನೆ ಹಾಕುತ್ತೇವೆ. ಆಜಾನ್​ ನಿಲ್ಲಿಸದಿದ್ದರೆ ದೇವಾಲಯಗಳಲ್ಲಿ ಸ್ಪೀಕರ್​ ಹಾಕುತ್ತೇವೆ. ರಾಮ ಭಜನೆ, ಶಿವನಾಮ, ಓಂಕಾರಗಳನ್ನೂ ಹಾಕುತ್ತೇವೆ ಎಂದು ಹಿಂದು ಪರ ಸಂಘಟನೆಯ ಕಾರ್ಯಕರ್ತರು ಎಚ್ಚರಿಕೆ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net