80 ವರ್ಷದ ವೃದ್ಧೆ ಮೇಲೆ ಸಂಬಂಧಿಕನಿಂದಲೇ ನೀಚ ಕೃತ್ಯ

cvbcvbcvbcvb
Published on

ಉತ್ತರಪ್ರದೇಶ: 80 ವರ್ಷದ ವೃದ್ಧೆ ಮೇಲೆ ಸಂಬಂಧಿಕನೇ ಅತ್ಯಾಚಾರ ಎಸಗಿರುವ ನೀಚ ಘಟನೆ ಉತ್ತರಪ್ರದೇಶದ ಬುದೌನ್​​ನಲ್ಲಿ ನಡೆದಿದೆ.

ಆಗಸ್ಟ್ 01 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವೃದ್ದೆಯನ್ನು ತನ್ನ ಮನೆಗೆ ಊಟಕ್ಕೆ ಬರುವಂತೆ ಆರೋಪಿ ಕರೆಸಿಕೊಂಡಿದ್ದಾನೆ. ಈ ವೇಳೆ ಕಂಠಪೂರ್ತಿ ಮದ್ಯ ಸೇವಿಸಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ವೃದ್ಧೆ ತೀವ್ರ ಅಸ್ವಸ್ಥಳಾಗಿ ಅಲ್ಲೇ ಬಿದ್ದಿದ್ದು, ಸಂಬಂಧಿಕರು ಬಂದ ನಂತರ ಘಟನೆ ಬಗ್ಗೆ ವಿವರಿಸಿದ್ದಾಳೆ. ಈ ಬಗ್ಗೆ ವಾಜಿರ್​ಗಂಜ್ ಪೊಲೀಸ್ ಠಾಣೆಯಲ್ಲಿ ತಕ್ಷಣ ದೂರು ನೀಡಿದ್ದಾರೆ. ಸೆಕ್ಷನ್ 376 ಅಡಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net