

ರಾಮನಗರ: ಬಿಡದಿ ಬಳಿ ಹೋಬಳಿಯ ಜೋಗರಪಾಳ್ಯದಲ್ಲಿ 'ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ಸೋಮವಾರ ಸಂಭವಿಸಿದ ವಿದ್ಯತ್ ಅವಘಡಲ್ಲಿ ಫೈಟರ್ ವಿವೇಕ್ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ರಂಜಿತ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ವಿವೇಕ್‌ಗೆ ಫೈಟಿಂಗ್ ದೃಶ್ಯಗಳು ಹೊಸದೇನಲ್ಲ. ಅವರು ಇಂತಹ ದೃಶ್ಯಗಳನ್ನು ನಿರ್ವಹಿಸುವಲ್ಲಿ ಪಳಗಿದ್ದರು ಎಂಬುದಕ್ಕೆ ಇಲ್ಲಿರುವ ಅದೇ ಚಿತ್ರದ ಶೂಟಿಂಗ್‌ನಲ್ಲಿ ವಿವೇಕ್ ಭಾಗವಹಿಸಿದ್ದ ಈ ದೃಶ್ಯಗಳೇ ಸಾಕ್ಷಿಯಾಗಿವೆ.