ನನಗೆ ಮೊದಲು ಡಾನ್ಸ್ ಹವ್ಯಾಸವಿತ್ತು... ಆದರೀಗ ಬೇರೆಯವರನ್ನ ಕುಣಿಸುವೆ, ನಾನು ಕುಣಿಯಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

1296391
Published on

ಬೆಳಗಾವಿ: ನನಗೆ ಮೊದಲು ಡಾನ್ಸ್ ಬಗ್ಗೆ ಬಹಳ ಆಸಕ್ತಿ ಇತ್ತು. ಹವ್ಯಾಸವೂ ಇತ್ತು. ಆದರೀಗ ಬೇರೆಯವರನ್ನ ಕುಣಿಸುತ್ತೇನೆ, ನಾನು ಕುಣಿಯಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಆ ಮೂಲಕ ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್​ ಕೊಟ್ಟರು.

ಬೆಳಗಾವಿಯಲ್ಲಿ ಬೆಳಗಾವಿಯ ಕಲಾವಿದ ರಾಜು ಪವಾರ್ ಆಯೋಜಿಸಿದ್ದ ಮರಾಠಿ ಕಾಮಿಡಿ ಶೋ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, 25 ವರ್ಷಗಳ ಹಿಂದೆ ನಾನು ಖಾನಾಪುರದಲ್ಲಿ ವಾಸವಿದ್ದೆ. ಖಾನಾಪುರದಿಂದ ಬೆಳಗಾವಿಗೆ ನನ್ನ ಮಗನನ್ನು ಡಾನ್ಸ್ ಕ್ಲಾಸ್‌ಗೆ ಕಲಾವಿದ ರಾಜು ಪವಾರ್‌ ಅವರ ಬಳಿ ಕರೆದುಕೊಂಡು ಬರ್ತಿದ್ದೆ. ರಾಜು ಪವಾರ್ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ನಾವೆಂದಿಗೂ ಕಲಾವಿದ ರಾಜು ಪವಾರ್ ಜತೆ ಇರ್ತೇವೆ ಎಂದರು.

ರಾಜಹಂಸಗಡದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಛತ್ರಪತಿ ಶಿವಾಜಿ ಮೂರ್ತಿ ಉದ್ಘಾಟನೆ ನಡೆಯಲಿದ್ದು, ಈ ವೇಳೆ ಎರಡು ದಿನ ವೇದಿಕೆ ಕಾರ್ಯಕ್ರಮ ಇರುತ್ತದೆ. ಕಲಾವಿದ ರಾಜು ಪವಾರ್‌ ಅವರು ಅಲ್ಲಿಯೂ ಕಾರ್ಯಕ್ರಮ ನಡೆಸಿ ಕೊಡಬೇಕು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಹೀಗೆ ಮಾತನಾಡುತ್ತಾ ಲಕ್ಷ್ಮೀ ಹೆಬ್ಬಾಳ್ಕರ್​, ನನಗೆ ಮೊದಲು ಡಾನ್ಸ್ ಹವ್ಯಾಸವೂ ಇತ್ತು. ಆದರೀಗ ಬೇರೆಯವರನ್ನ ಕುಣಿಸುತ್ತೇನೆ, ನಾನು ಕುಣಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net