ಮಲಗಿದಲ್ಲಿ ಲೈನ್‌ಮನ್ ಸಾವು

Death Case
Published on

ಪಡುಬಿದ್ರಿ: ಉದ್ಯಾವರ ಗ್ರಾಮದ ನಿವಾಸಿ ಲೈನ್‌ಮನ್ ಕಿಶೋರ್ ಕುಮಾರ್ (49) ಮನೆಯಲ್ಲಿ ಮಲಗಿದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.

ಕಳೆದ 20 ವರ್ಷವಗಳಿಂದ ಲೈನ್‌ಮನ್ ಆಗಿ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಪಡುಬಿದ್ರಿ ಶಾಖೆಯಲ್ಲಿ ಲೈನ್‌ಮನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು. ಒಂದು ವರ್ಷದ ಹಿಂದೆ ಹೃದಯ ಸಂಬಂಧಿ ಸಮಸ್ಯ ಕಾಣಿಸಿಕೊಂಡಿದ್ದು ಆ ಬಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಶನಿವಾರ ಎಂದಿನಂತೆ ಬೆಳಗ್ಗೆ ಪಡುಬಿದ್ರಿಗೆ ಕರ್ತವ್ಯಕ್ಕೆ ಹೋಗಿ ಸಂಜೆ ವಾಪಸ್ ಮನೆಗೆ ಬಂದು ರಾತ್ರಿ ಊಟ ಮಾಡಿ ರೂಂನಲ್ಲಿ ಮಲಗಿದ್ದರು. ಭಾನುವಾರ ಬೆಳಗ್ಗೆ ಪತ್ನಿ ಕಿಶೋರ್ ಅವರನ್ನು ಎಬ್ಬಿಸುವ ಸಮಯ ಅವರು ಏಳದೇ ಇದ್ದು ಸಂಬಂಧಿಕರ ಸಹಾಯದಿಂದ ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಕಿಶೋರ್ ಕುಮಾರ್ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net