

ಕಲಾದಗಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಇನ್ನಿತರ ಪ್ರಮುಖರ ಮೇಲೆ ದ್ವೇಷ ರಾಜಕಾರಣ ಮಾಡುತ್ತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಕಾಂಗ್ರೆಸ್ ಮುಖಂಡ ಎಂ.ಬಿ. ಸೌದಾಗರ ಹೇಳಿದರು.
ಕಾಂಗ್ರೆಸ್ನ ಮುಂಚೂಣಿ ಯುವ ನಾಯಕ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹಗೊಳಿಸಲು ಕಾರಣವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಕಲಾದಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: ಓದಿನೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ
ಜನಪರವಾಗಿರುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮುಖಂಡರನ್ನು, ಕಾರ್ಯಕರ್ತರನ್ನು ಮೋಸ, ಕುತಂತ್ರದಿಂದ ಮುಗಿಸಬೇಕೆಂಬ ಪ್ರಯತ್ನ ಎಂದಿಗೂ ಈಡೇರುವುದಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಸಂಶಿ ಮಾತನಾಡಿದರು
ಮುಖಂಡರಾದ ವಿ.ಜಿ. ದೇಶಪಾಂಡೆ, ಕೀರಪ್ಪ ಬಿಸಾಳೆ, ಕೀರಪ್ಪ ಮಾದರ, ಬಸವರಾಜ ಬಿಲಕೇರಿ, ಮಲ್ಲಪ್ಪ ಜಮಖಂಡಿ, ಸಿಡ್ಲೆಪ್ಪ ಮಾದರ, ಎಂ.ಎ. ತೇಲಿ, ರಾಮಣ್ಣ ತಳವಾರ, ರಮೇಶ ಮಾದರ, ಹನುಮಂತ ಗದ್ದನಕೇರಿ, ಅಕ್ರಂ ಸೌದಾಗರ, ನಂದೂ ಕಾತರಕಿ, ಅಶ್ಪಾಕ್ ಬೀಳಗಿ, ರಿಯಾಜ್ ಪೀರಜಾದೆ, ಕೃಷ್ಣಾ ದೇವಮಾನೆ, ಸುಭಾಷ ದುರ್ವೆ, ಪ್ರಕಾಶ್ ಆಸಂಗಿ, ಭೀಮಸಿ ಭಜಂತ್ರಿ ಇತರರಿದ್ದರು.