ಭಟ್ಕಳ ಬಂದ್‌ಗೆ ನೀರಸ ಪ್ರತಿಕ್ರಿಯೆ

BKL BUNDH
Published on

ಭಟ್ಕಳ: ಮಹ್ಮದ್ ಪೈಗಂಬರ್ ವಿರುದ್ಧ ಉತ್ತರ ಪ್ರದೇಶದ ದಾಸ್ನಾ ದೇವಿ ದೇವಸ್ಥಾನದ ಪೀಠಾಧಿಪತಿ ಯತಿ ನರಸಿಂಹಾನಂದ ಸ್ವಾಮೀಜಿ ಹೇಳಿಕೆ ಖಂಡಿಸಿ ತಂಜೀಂ ಸಂಸ್ಥೆ ಮಂಗಳವಾರ ಕರೆ ನೀಡಿದ್ದ ಭಟ್ಕಳ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಸ್ಲಿಂ ಸಮುದಾಯದ ಅಂಗಡಿಗಳು, ಶಾಲಾ, ಕಾಲೇಜು ಮುಚ್ಚುವ ಮೂಲಕ ಬೆಂಬಲ ನೀಡಿದವು. ತಂಜೀಂ ಸಂಸ್ಥೆ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಅವರು ಎಲ್ಲ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜು ಬಂದ್ ಮಾಡುವಂತೆ ಹಿಂದು ಸಮುದಾಯವನ್ನು ಕೋರಿಕೊಂಡಿದ್ದರು. ಆದರೆ, ಮುಸ್ಲಿಮೇತರ ಅಂಗಡಿಗಳು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸಿದರು. ಮುಸ್ಲಿಮರ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆಗೆ ಇರುವ ಬೆರಳಣಿಕೆಯಷ್ಟು ಜನ ಮುಸ್ಲಿಮೇತರ ವ್ಯಾಪಾರಸ್ಥರು ಮಾಲೀಕರ ಸೂಚನೆ ಹಿನ್ನೆಲೆ ಬಂದ್ ಮಾಡಿರುವುದು ಗಮನಕ್ಕೆ ಬಂದಿದೆ.

ಮಾರುಕಟ್ಟೆಯಲ್ಲಿ ಗ್ರಾಹಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿತ್ತು. ಬಸ್ ನಿಲ್ದಾಣ, ಆಟೋ ತಂಗುದಾಣದಲ್ಲಿ ಜನ ಸಂಚಾರ ಎಂದಿನಂತಿತ್ತು. ತಾಲೂಕಿನಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಮುಂಜಾನೆಯಿಂದಲೇ ಡಿವೈಎಸ್ಪಿ, ಸಿಪಿಐ ಸೇರಿದಂತೆ ಪೊಲೀಸ್ ಅಧಿಕಾರಿಗಳು ಎಲ್ಲ ಭಾಗದಲ್ಲಿ ಸಂಚಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net