

ಮಂಗಳೂರು: ಕರ್ನಾಟಕದ ಕರಾವಳಿ ಭಾಗದಲ್ಲಿ ಕಾರ್ಣಿಕದ ದೈವ ಎಂದು ಜನಜನಿತವಾಗಿರುವ ಕುತ್ತಾರಿನ ಸ್ವಾಮಿ ‘ಕೊರಗಜ್ಜ’ನವರ ಕುತ್ತಾರು ದೆಕ್ಕಾಡು ಆದಿಸ್ಥಳ ಕುರಿತು ಸಮಗ್ರ ವಾಸ್ತವಾಂಶಗಳನ್ನು ಭಕ್ತರಿಗೆ ತಿಳಿಸಲು www.swamykoragajjaaadisthalakuthar.com ವೆಬ್ಸೈಟ್ ರಚನೆಯಾಗಿದೆ.
ಈ ವೆಬ್ಸೈಟ್ ಅನ್ನು ವೆಬ್ ಬ್ರೈನಿ ಸಾಫ್ಟ್ವೇರ್ ಸೊಲ್ಯೂಶನ್ಸ್ ಸಂಸ್ಥೆಯವರು ವಿನ್ಯಾಸಗೊಳಿಸಿದ್ದಾರೆ. ಮುನ್ನೂರು ಗ್ರಾಮದ ಕುತ್ತಾರಿನಲ್ಲಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆಶೀರ್ವಾದದೊಂದಿಗೆ ಜ್ಯೋತಿಷ್ಯರಾದ ವೇದಮೂರ್ತಿ ದಿನೇಶ್ ಪಣಿಕ್ಕರ್ ಅವರಿಂದ ಕ್ಷೇತ್ರದ ಪಾವಿತ್ರ್ಯತೆ ಮತ್ತು ಅಭಿವೃದ್ಧಿ ಬಗ್ಗೆ ತಾಂಬೂಲ ಪ್ರಶ್ನೆಯಲ್ಲಿ ಚಿಂತಿಸಲಾಯಿತು. ಕುತ್ತಾರು ಸ್ವಾಮಿ ಕೊರಗಜ್ಜನವರ ದೆಕ್ಕಾಡು ಆದಿಸ್ಥಳ ಕುರಿತು ಭಕ್ತರೊಂದಿಗೆ ಸಂವಹನ ನಡೆಸಲು ಅನುಕೂಲವಾಗಲೆಂದು ವೆಬ್ಸೈಟ್ ಲೋಕಾರ್ಪಣೆ ಮಾಡಲಾಗಿದೆ. ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಮಾಗಣ್ತಡಿ ಶ್ರೀಧರ್ ಶೆಟ್ಟಿ ಅವರು ಆದಿ ಸ್ಥಳದ ವೆಬ್ಸೈಟ್ ಹಾಗೂ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.