ಕುಣಿಗಲ್​ ಶಾಸಕ ರಂಗನಾಥ್​ಗೆ 'ಭೂತ'ದಂತೆ ಕಂಡ ಸಚಿವ ಮಾಧುಸ್ವಾಮಿ!​

madhuswamy jcm ranganath kunigal
Published on

ಬೆಂಗಳೂರು: ಕುಣಿಗಲ್ ಕ್ಷೇತ್ರದ ಕಾಂಗ್ರೆಸ್​ ಶಾಸಕ ಎಚ್​.ಡಿ. ರಂಗನಾಥ್​ ಅವರಿಗೆ ಸಚಿವ ಮಾಧುಸ್ವಾಮಿ ಭೂತದಂತೆ ಕಂಡಿದ್ದಾರೆ. ಈ ಬಗ್ಗೆ ಸ್ವತಃ ಶಾಸಕರೇ ವಿಧಾನಸೌಧದಲ್ಲಿ ಹೇಳಿಕೊಂಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಕಲಾಪ ವೇಳೆ ಬೇಡಿಕೆ ವಿಚಾರವಾಗಿ ‌ಮಾತನಾಡುತ್ತಿದ್ದ ಶಾಸಕ ರಂಗನಾಥ್, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೂರು ಟಿಎಂಸಿ ನೀರು ತೆಗೆದುಕೊಂಡಿದ್ದೆ. ಆ ಯೋಜನೆ ಆರಂಭವಾಗಬೇಕಿತ್ತು. ಅಷ್ಟರಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದು ಹೋಯ್ತು. ಬಳಿಕ ಬಿಜೆಪಿ ಸರ್ಕಾರ ಬಂತು. ಯೋಜನೆಗೆ ಸಚಿವ ಮಾಧುಸ್ವಾಮಿ ಅಡ್ಡಗಾಲು ಹಾಕಿದ್ರು. ನನಗೆ ಮಾಧುಸ್ವಾಮಿ ಭೂತದ ತರಹ‌ ಕಂಡರು... ಎಂದು ಆಕ್ರೋಶ ಹೊರಹಾಕಿದರು. ಶಾಸಕರ ಮಾತು ಕೇಳಿದ ಮಾಧುಸ್ವಾಮಿ,‌ ನಕ್ಕು ಸಮ್ಮನಾದರು.

ಮಾತು ಮುಂದುವರಿಸಿದ ರಂಗನಾಥ್​, ದಿ ಕಾಶ್ಮೀರ್​ ಫೈಲ್ಸ್ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಕೊಟ್ಟಿದ್ದೀರಾ. ಆದ್ರೆ ಪುನಿತ್ ರಾಜ್​ಕುಮಾರ್​ ಅಭಿಯಾನದ ಜೇಮ್ಸ್ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಯಾಕೆ ಕೊಟ್ಟಿಲ್ಲ? ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಕೊಟ್ಟಿದ್ದೀರಿ. ಬಹಳ ಸಂತೋಷ. ಈಗ ಜೇಮ್ಸ್ ಚಿತ್ರಕ್ಕೂ ಟ್ಯಾಕ್ಸ್ ಫ್ರೀ ಮಾಡಿ. ಈ ಕ್ರೆಡಿಟ್ ಕೂಡ ಬಿಜೆಪಿ ಸರ್ಕಾರಕ್ಕೇ ಹೋಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net