ಕೃಷ್ಣಾ ಮಿಲ್ಕ್​ ಡೇರಿ ಸಂಸ್ಥಾಪಕ ಪುತ್ತು ಪೈ ನಿಧನ

hanumantha pai
Published on

ಕಾರವಾರ: ಯಲ್ಲಾಪುರ ಕಿರವತ್ತಿಯ ಶ್ರೀ ಕೃಷ್ಣಾ ಮಿಲ್ಕ್ ಪ್ರವರ್ತಕ ಹನುಮಂತ ಪೈ(68) ಮಂಗಳವಾರ ನಿಧನರಾದರು.

ಭಟ್ಕಳ ಮೂಲದ ಹನುಮಂತ ಪೈ ಅವರು ಪುತ್ತು ಪೈ ಎಂದೇ ಪ್ರಸಿದ್ಧರಾಗಿದ್ದರು. ಹಾಲು ಮಾರಿ ಜೀವಿಸುವ ಗೌಳಿ ಜನಾಂಗ ವಾಸಿಸುವ ಕಿರವತ್ತಿಯಲ್ಲಿ 1989ರಲ್ಲಿ ಕೃಷ್ಣಾ ಮಿಲ್ಕ್ ಡೇರಿಯನ್ನು ಸ್ಥಾಪಿಸಿದ್ದರು. ಈ ಡೇರಿ ಬೃಹತ್ ಉದ್ಯಮ ಸಂಸ್ಥೆಯಾಗಿ ಬೆಳೆದಿದೆ. ಜತೆಗೆ ಹಂಗ್ಯೋ ಐಸ್ ಕ್ರೀಂ ಕಂಪನಿ ಕೂಡ ಪ್ರಾರಂಭಿಸಿ ಅದನ್ನೂ ಯಶಸ್ವಿಗೊಳಿಸಿದ್ದರು.

ಹನುಮಂತ ಪೈ ಅವರು ಗೋವಾ ಪರ್ತಗಾಳಿ ಜೀವೋತ್ತಮ ಮಠದ ಜತೆ ನಿಕಟ ಸಂಪರ್ಕ ಹೊಂದಿದ್ದರು. ಅವರಿಗೆ ಕೆಲ ವರ್ಷಗಳ ಹಿಂದೆ ಮಠದಿಂದ ವಿದ್ಯಾಧಿರಾಜ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net