

ಬೆಂಗಳೂರು: ಇಡಿ(ಜಾರಿ ನಿರ್ದೇಶನಾಲಯ) ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಇಬ್ಬರೂ ಶುಕ್ರವಾರ ಆಗಮಿಸಿದ್ದು, ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಡಿಕೆ ಸಹೋದರರು ಯಂಗ್ ಇಂಡಿಯಾ ಟ್ರಸ್ಟ್ಗೆ ದೇಣಿಗೆ ನೀಡಿದ್ದ ಹಿನ್ನೆಲೆಯಲ್ಲಿ ಅ.7 ರಂದು ವಿಚಾರಣೆಗೆ ಬರುವಂತೆ ಸೆ.23ರಂದೇ ಇವರಿಬ್ಬರಿಗೂ ಇಡಿ ಸಮನ್ಸ್ ಜಾರಿ ಮಾಡಿತ್ತು.
ಭಾರತ್ ಜೋಡೋ ಪಾದಯಾತ್ರೆ ಕಾರಣಕ್ಕೆ ನಾವು ವಿಚಾರಣೆಗೆ ಬರಲಾಗುತ್ತಿಲ್ಲ ಎಂಬ ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಮರ್ಥನೆಯನ್ನು ಒಪ್ಪದ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿ ಅ.7ರಂದೇ ವಿಚಾರಣೆಗೆ ಬರುವಂತೆ ಸೂಚನೆ ನೀಡಿತ್ತು. ಆದರೆ ಭಾರತ್ ಜೋಡೋ ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡುವಂತೆ ಡಿ.ಕೆ.ಸಹೋದರರು ಪತ್ರ ಬರೆದು ಸಮಯಾವಕಾಶ ಕೋರಿದ್ದರು. ಇದನ್ನೊಪ್ಪದ ಜಾರಿ ನಿರ್ದೇಶನಾಲಯ ವಿಚಾರಣೆಗೆ ಬರುವಂತೆ ಅ.5ರಂದು ಮರು ನೋಟಿಸ್ ಜಾರಿ ಮಾಡಿತ್ತು. ಹಾಗಾಗಿ ಇವರಿಬ್ಬರೂ ದೆಹಲಿಯ ಇಡಿ ಕಚೇರಿಗೆ ಹಾಜರಾಗಿದ್ದಾರೆ.