

ಬೆಂಗಳೂರು: ಪರಮಾಣು ಇಲಾಖೆಯಡಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ನಲ್ಲಿ ಗುತ್ತಿಗೆ ಆಧಾರದಲ್ಲಿ ಎರಡು ವರ್ಷದ ಅವಧಿಗೆ ಒಟ್ಟು 19 ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ ನಾಲ್ಕು ವರ್ಷದವರೆಗೆ ಅವಧಿ ವಿಸ್ತರಿಸಬಹುದು. ಕೈಗಾ ಮತ್ತು ಬೆಂಗಳೂರು ವಲಯದಲ್ಲೂ ತಲಾ ಒಂದೊಂದು ಹುದ್ದೆ ಮೀಸಲಿರಿಸಲಾಗಿದ್ದು, ಕೆಲ ಭಾಗಗಳಲ್ಲಿ ಮಾತ್ರ ಮೀಸಲಾತಿ ಸಡಿಲಿಕೆ ಇದೆ.
ಹುದ್ದೆಗಳ ವಿವರ: ಟೆಕ್ನಿಕಲ್ ಆಫೀಸರ್-13, ಸೈನ್ಟಿಫಿಕ್ ಅಸಿಸ್ಟೆಂಟ್-ಎ-4, ಸೀನಿಯರ್ ಮತ್ತು ಜೂನಿಯರ್ ಆರ್ಟಿಸನ್-2 (ಕುಶಲಕರ್ಮಿ) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಲ್ಲ ಹುದ್ದೆಗಳನ್ನು ಸಾಮಾನ್ಯ ವರ್ಗ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.
ಎಲ್ಲೆಲ್ಲಿ ನೇಮಕ?: ಬೆಂಗಳೂರು, ಕೈಗಾ ಸೇರಿದಂತೆ ದಿಗರು, ನಲಿಯಾ, ಅಂಬಲಾ, ಕಪುರ್ತಲಾ, ರಾಮೇಶ್ವರಂ, ಜೋದ್ಪುರ, ದಲ್ಹೋಸಿ, ರವಾಬ್ತಾ, ಪರದೀಪ್, ಕೊಲ್ಕತ್ತ, ಅಹಮದಾಬಾದ್, ಮುಂಬೈ, ಕುದನ್ಕುಲಂ ಮತ್ತು ಗುಜರಾತ್ನ ಕಾಂಡ್ಲಾದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವೇತನ: ಟೆಕ್ನಿಕಲ್ ಆಫೀಸರ್ಗೆ 25,000 ರೂ. ಸೈನ್ಟಿಫಿಕ್ ಅಸಿಸ್ಟೆಂಟ್ಗೆ 20,670 ರೂ. ಹಾಗೂ ಸೀನಿಯರ್ ಮತ್ತು ಜೂನಿಯರ್ ಆರ್ಟಿಸನ್ಗೆ ಕ್ರಮವಾಗಿ 18,974 ರೂ, 18,824 ರೂ. ಮಾಸಿಕ ವೇತನ ಜತೆ ಸರ್ಕಾರಿ ಭತ್ಯೆ ಕೂಡ ಇರಲಿದೆ.
ವಯೋಮಿತಿ: ಟೆಕ್ನಿಕಲ್ ಆಫೀಸರ್ ಹುದ್ದೆಗೆ 30 ವರ್ಷ, ಇನ್ನುಳಿದ ಹುದ್ದೆಗಳಿಗೆ 25 ವರ್ಷ ವಯೋಮಿತಿ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇದೆ.
ಶೈಕ್ಷಣಿಕ ಅರ್ಹತೆ: ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್/ ಟೆಲಿಕಮ್ಯುನಿಕೇಷನ್/ ಐಟಿ/ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಕನಿಷ್ಠ ಶೇ.60 ಅಂಕದೊಂದಿಗೆ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ: ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿರುವ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಯಾ ವಲಯಗಳಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗತಕ್ಕದ್ದು. ಸೂಕ್ತ ದಾಖಲೆಗಳಿಲ್ಲದ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಆಯ್ಕೆ ಪ್ರಕ್ರಿಯೆ: ಯಾವ ವಲಯ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಮೊದಲೇ ಅರ್ಜಿಯಲ್ಲಿ ನಮೂದಿಸಬೇಕು. ಇದರ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ವೈಯಕ್ತಿಕ ಸಂದರ್ಶನ ಮತ್ತು ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಟೆಕ್ನಿಕಲ್ ಆಫೀಸರ್ ಹುದ್ದೆಗೆ ನೇರ ಸಂದರ್ಶನ ನಡೆಯಲಿದ್ದು, ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಂತರ ಸಂದರ್ಶನ ನಡೆಯಲಿದೆ.
ಸಂದರ್ಶನ ನಡೆಯುವ ದಿನ: 12.4.2022
ಬೆಂಗಳೂರು ಮತ್ತು ಕೈಗಾ ಅಭ್ಯರ್ಥಿಗಳಿಗೆ ಸಂದರ್ಶನ ನಡೆಯುವ ಸ್ಥಳ: No. 1/1, 2nd floor, LIC Building, Sampige Road, Malleswaram, Bengaluru - 560 003.
ಅಧಿಸೂಚನೆಗೆ: https://bit.ly/3DIMj0V
ಮಾಹಿತಿಗೆ: https://www.ecil.co.in/