19 ಮಾನಸಿಕ ಅಸ್ವಸ್ಥರಿಗೆ ಚಾಕು ಚುಚ್ಚಿ ಕೊಂದಿದ್ದ ಪಾಪಿ; ಮೂರು ವರ್ಷಗಳ ನಂತರ ಸಿಕ್ಕಿತು ಮರಣದಂಡನೆ ಶಿಕ್ಷೆ

man killed 19
Published on

ಟೋಕಿಯೋ: ಮೂರು ವರ್ಷಗಳ ಹಿಂದೆ ಮಾನಸಿಕ ರೋಗಿಗಳ ಆರೈಕೆ ಕೇಂದ್ರದಲ್ಲಿ 19 ಮಾನಸಿಕ ಅಸ್ವಸ್ಥರನ್ನು ಚಾಕುವಿನಿಂದ ಇರಿದು ಕೊಂದ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿ ಜಪಾನ್​ನ ನ್ಯಾಯಾಲಯ ತಿಳಿಸಿದೆ.

ಸತೋಶಿ ಉಮಾಟ್ಸು(30) ಹೆಸರಿನ ವ್ಯಕ್ತಿ 2016ರಲ್ಲಿ ತಾನು ಕೆಲಸ ಮಾಡುತ್ತಿದ್ದ ಮಾನಸಿಕ ರೋಗಿಗಳ ಆರೈಕಾ ಕೇಂದ್ರದಲ್ಲಿದ್ದ ಅಸ್ವಸ್ಥರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ಹಾಸಿಗೆ ಮೇಲೆ ಮಲಗಿದ್ದ ಅಸ್ವಸ್ಥರಿಗೆ ನಿರ್ದಾಕ್ಷಿಣ್ಯವಾಗಿ ಚಾಕು ಚುಚ್ಚಿದ್ದ. 19 ಅಸ್ವಸ್ಥರನ್ನು ಕೊಂದ ಸತೋಶಿ ಇನ್ನೂ ಅನೇಕರಿಗೆ ಚಾಕು ಚುಚ್ಚಿದ್ದು ಅವರೆಲ್ಲ ಸ್ವಲ್ಪದರಲ್ಲೇ ಸಾವಿನಿಂದ ಬಚಾವಾಗಿ ಆಸ್ಪತ್ರೆ ಸೇರಿದ್ದರು.

ಈ ಅಸ್ವಸ್ಥರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಇವರಿದ್ದರೆ ಹೊರೆಯೇ ಹೊರೆತು ಒಳ್ಳೆಯದೇನೂ ಇಲ್ಲ. ಹಾಗಾಗಿ ನಾನು ಅವರನ್ನು ಕೊಲ್ಲುವ ಪ್ರಯತ್ನ ಮಾಡಿದೆ ಎಂದು ಆತ ನ್ಯಾಯಾಲಯದಲ್ಲಿ ಸತ್ಯವನ್ನು ಒಪ್ಪಿಕೊಂಡಿದ್ದ. ಕ್ಷಮಾಪಣಾ ಪತ್ರವನ್ನು ಸಲ್ಲಿಸುವುದಿಲ್ಲ, ನ್ಯಾಯಾಲಯ ಯಾವುದೇ ಶಿಕ್ಷೆ ಕೊಟ್ಟರೂ ಅದಕ್ಕೆ ತಾನು ಸಿದ್ಧ ಎಂದು ಆತ ಹೇಳಿದ್ದ.

ಸತೋಶಿಗೆ ಮರಣದಂಡನೆ ಶಿಕ್ಷೆ ನೀಡಿರುವುದಾಗಿ ಜಪಾನ್​ನ ನ್ಯಾಯಾಲಯ ಇಂದು ಆದೇಶಿಸಿದೆ. ಅಪರಾದಿ ಪರ ವಕೀಲರು, ಅಪರಾದಿಯು ಅಪರಾದವೆಸಗಿದ ಸಮಯದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ, ಹಾಗಾಗಿ ಶಿಕ್ಷೆಯಲ್ಲಿ ರಿಯಾಯತಿಯನ್ನು ತೋರಿಸಬೇಕು ಎಂದು ವಾದ ಮಂಡಿಸಿದರಾದರೂ ಆತನಿಗೆ ಮರಣದಂಡನೆಯನ್ನು ವಿಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net