More

    ಲೈಂಗಿಕ ಬಯಕೆ… ಕಾಲ್​ ಗರ್ಲ್​ಗಾಗಿ ಆನ್​ಲೈನ್​ನಲ್ಲಿ​ ಸರ್ಚ್​ ಮಾಡಿದ ಟೆಕ್ಕಿಗೆ ಕಾದಿತ್ತು ಬಿಗ್​ ಶಾಕ್!​

    ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆ ಹೆಚ್ಚಾಗಿದೆ. ಅಮಾಯಕ ಜನರ ದೌರ್ಬಲ್ಯವನ್ನು ತಿಳಿದುಕೊಂಡು ಜಾಲತಾಣದಲ್ಲಿ ವಂಚಿಸುವುದು ಸಾಮಾನ್ಯವಾಗಿದೆ. ಮಾಹಿತಿಗಾಗಿ ಗೂಗಲ್​ ಸರ್ಚ್​ ಮಾಡುವಾಗಲೂ ತುಂಬಾ ಎಚ್ಚರಿಕೆ ವಹಿಸಬೇಕಿದೆ. ಸ್ವಲ್ಪ ಯಾಮಾರಿದರೂ ಜೇಬು ಖಾಲಿಯಾಗುವುದಂತೂ ಖಚಿತ. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಘಟನೆ.

    ವಿವರಣೆಗೆ ಬರುವುದಾದರೆ, ಹೈದರಾಬಾದ್​ನ ಚಾಂದ್​ ನಗರದ ಯುವಕನೊಬ್ಬ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಆಕರ್ಷಕ ಸಂಬಳದೊಂದಿಗೆ ಐಷಾರಾಮಿ ಜೀವನ ಸಾಗಿಸುತ್ತಿದ್ದಾನೆ. ಹೀಗಿರುವಾಗ ಟೆಕ್ಕಿಗೆ ಲೈಂಗಿಕ ಬಯಕೆಯಾಗುತ್ತದೆ. ಅದಕ್ಕೆ ಹಣ ಖರ್ಚು ಮಾಡಲು ಸಹ ಟೆಕ್ಕಿ ಮುಂದಾಗಿರುತ್ತಾನೆ. ಕೊನೆಗೆ ಗೂಗಲ್​ನಲ್ಲಿ ಕಾಲ್​ ಗರ್ಲ್​ಗಾಗಿ ಯುವಕ ಹುಡುಕಾಡುತ್ತಾನೆ.

    ವೆಬ್​ಸೈಟ್​ ಒಂದರ ಲಿಂಕ್​ ಮೇಲೆ ಕ್ಲಿಕ್​ ಮಾಡಿ, ಯುವತಿಯ ವಾಟ್ಸ್​ಆ್ಯಪ್​ ನಂಬರ್​ ಸಹ ಪಡೆಯುತ್ತಾನೆ. ಬಳಿಕ ಚಾಟಿಂಗ್​ ಆರಂಭಿಸುತ್ತಾನೆ. ಆದರೆ, ಚಾರ್ಮಿ ಹೆಸರಿನಲ್ಲಿ ಚಾಟಿಂಗ್​ ಮಾಡುವ ಪಟೇಲ್​ ಎಂಬಾತ ಸಂತ್ರಸ್ತ ಯುವಕನಿಗೆ ಕೆಲ ಯುವತಿಯರ ಫೋಟೋವನ್ನು ಕಳುಹಿಸುತ್ತಾನೆ. ಮೊದಲ ಬುಕ್ಕಿಂಗ್​ಗೆ 510 ರೂ. ಹಣ ಪಾವತಿಸಲು ಕೇಳುತ್ತಾನೆ. ಸ್ವಲ್ಪವು ತಡಮಾಡದೇ ಯುವಕ ಹಣ ಕಳುಹಿಸುತ್ತಾನೆ. ಇದಾದ ಬಳಿಕ ಭದ್ರತಾ ಠೇವಣಿಯಾಗಿ ರೂ.5,500 ಮತ್ತು ಮತ್ತೆ ರೂ.7,800 ಕಳುಹಿಸಲು ಕೇಳುತ್ತಾನೆ. ಇತ್ತ ಟೆಕ್ಕಿ ಅವರು ಕೇಳಿದ್ದನ್ನೆಲ್ಲಾ ಕಳುಹಿಸುತ್ತಾನೆ. ವಿಚಾರಿಸುವ ಗೋಜಿಗೆ ಹೋಗುವುದೇ ಇಲ್ಲ.

    ಸೈಬರ್ ಕ್ರಿಮಿನಲ್‌ಗಳು ವಿವಿಧ ಕಾರಣಗಳನ್ನು ನೀಡಿ ಸಂತ್ರಸ್ತನಿಂದ ಒಟ್ಟು 1.97 ಲಕ್ಷ ರೂ. ಹಣವನ್ನು ದೋಚುತ್ತಾರೆ. ಕೊನೆಗೆ ಎಲ್ಲವೂ ವಂಚನೆ ಎಂದು ಅರಿತ ಸಂತ್ರಸ್ತ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಇಂತಹ ಅಪರಾಧಗಳ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಅನುಮಾನಾಸ್ಪದ ಸಂದೇಶಗಳು ಮತ್ತು ಲಿಂಕ್‌ಗಳನ್ನು ತೆರೆಯಬೇಡಿ ಎಂದು ಕರೆ ನೀಡಿದ್ದಾರೆ. (ಏಜೆನ್ಸೀಸ್​)

    ಮಧ್ಯರಾತ್ರಿ ಮಹಿಳಾ ಎಸ್​ಐ ಹಿಂಬಾಲಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ: ಮೂವರ ಬಂಧನ, ಕಾರು ಸೀಜ್​

    PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು

    ದೇಶದಲ್ಲಿ ಕರೊನಾ ಸೋಂಕಿನ ತೀವ್ರತೆ ಹೆಚ್ಚುತ್ತಿದೆ; ಅಧಿಕೃತವಾಗಿ ಚೀನಾ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts