More

    PSI ಹುದ್ದೆ ನೇಮಕಾತಿಯಲ್ಲಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಜಾಮೀನು

    ಕಲಬುರಗಿ: 545 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಇಂದು ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

    ಕಿಂಗ್​ಪಿನ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ಕಾಶಿನಾಥ್ ಚಿಲ್, ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ ಸೇರಿ 26 ಜನರಿಗೆ ಜಾಮೀನು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ.ಪಾಟೀಲ್ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಜಾಮೀನು ಪಡೆದವರ ಈ ಪೈಕಿ ಐವರು ಪರೀಕ್ಷಾ ಮೇಲ್ವಿಚಾರಕರು, 8 ಮಂದಿ ಅಭ್ಯರ್ಥಿಗಳು, 13 ಮಂದಿ ಕಿಂಗ್​ಪಿನ್ ಮತ್ತು ಮಧ್ಯವರ್ತಿಗಳು.

    ದಿವ್ಯಾ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿಗೆ ಕಳೆದ ಸೆ.27ರಂದು ಕಲಬುರಗಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ದಿವ್ಯಾ ಹಾಗರಗಿ, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯದರ್ಶಿ ಕೂಡ. ರಾಜೇಶ್​ ಈ ಶಾಲೆಯ ಅಧ್ಯಕ್ಷ. ಕಲಬುರಗಿ ಜ್ಞಾನಜ್ಯೋತಿ ಶಾಲೆ ಕೇಂದ್ರದಲ್ಲಿ ಪಿಎಸ್​ಐ ಪರೀಕ್ಷೆ ಬರೆದ ಬಹುತೇಕರು ಆಯ್ಕೆಯಾಗಿದ್ದರು. ಪಿಎಸ್​ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣ ರಾಷ್ಟ್ರಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು.(ಕಲಬುರಗಿ, ದಿಗ್ವಿಜಯ ನ್ಯೂಸ್​)

    ಯಶವಂತಪುರ ರೈಲು ನಿಲ್ದಾಣದಲ್ಲಿ ಡ್ರಮ್​ನಿಂದ ದುರ್ವಾಸನೆ… ತೆರೆದು ನೋಡಿದ್ರೆ ಅಪರಿಚಿತ ಯುವತಿಯ ಶವ!

    18 ಸಾವಿರ ಮಂದಿಯನ್ನ ಕೆಲಸದಿಂದ ವಜಾ ಮಾಡುವುದಾಗಿ ಅಮೆಜಾನ್​ ಘೋಷಣೆ! ಉದ್ಯೋಗಿಗಳಲ್ಲಿ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts