ಬೆಂಗಳೂರು: ಯಶವಂತಪುರ ರೈಲು ನಿಲ್ದಾಣದಲ್ಲಿ ಕೆಮಿಕಲ್ ಡ್ರಮ್ ಒಳಗೆ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ.
ಯುವತಿಯ ವಯಸ್ಸು ಅಂದಾಜು 20 ವರ್ಷ ಆಗಿದ್ದು, ವಿವಾಹಿತೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ 9.30ರಲ್ಲಿ ಯಶವಂತಪುರ ರೈಲು ನಿಲ್ದಾಣ ಫ್ಲಾಟ್‌ಫಾರಂ 1ರಲ್ಲಿ ತುಮಕೂರು ಕಡೆ ಸಾಗುವ ನಿಲ್ದಾಣದ ಕೊನೆಯಲ್ಲಿ ಪ್ಲಾಸ್ಟಿಕ್ ಡ್ರಮ್ ಪತ್ತೆಯಾಗಿತ್ತು. ದುರ್ವಾಸನೆ ಬರುವುದನ್ನು ಗಮನಿಸಿ ಸ್ವೀಪರ್ ಮಹಿಳೆಯೊಬ್ಬರು ಆರ್‌ಪಿಎಫ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಡ್ರಮ್ ಪರಿಶೀಲನೆ ನಡೆಸಿದಾಗ ಅಪರಿಚಿತ ಯುವತಿಯ ಶವ ಪತ್ತೆಯಾಗಿದೆ. ಬೇರೆ ಎಲ್ಲಿಯೋ ಕೊಲೆ ಮಾಡಿ ಸಾಕ್ಷ್ಯನಾಶ ಪಡಿಸುವ ಉದ್ದೇಶಕ್ಕೆ ಡ್ರಮ್‌ನಲ್ಲಿ ಶವ ತುಂಬಿ ರೈಲು ನಿಲ್ದಾಣಕ್ಕೆ ತಂದಿಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಯಾಂಟ್ರೋ ರವಿ ಹೆಸರು ಹೇಳುತ್ತಲೇ ಹೊಸ ಬಾಂಬ್ ಸಿಡಿಸಿದ ಎಚ್ಡಿಕೆ! ಈ ಸತ್ಯ ಹೇಳ್ತೀರಾ ಸಿಎಂ ಬೊಮ್ಮಾಯಿ ಅವರೇ?