More

    ಮಿಲಿಟರಿ ನೇಮಕಾತಿಗೂ ನಕಲಿ ಕಾಟ

    ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪಿನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ವೇಳೆ ಬದಲಿ ಅಭ್ಯರ್ಥಿಗಳು ಪರೀಕ್ಷೆ ಎದುರಿಸಲು ಹೋಗಿ ಅಧಿಕಾರಿಗಳ ಕೈಗೆ ಸೆರೆಸಿಕ್ಕು, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

    ಬೆಂಗಳೂರಿನ ಅತೀಶ್ ಮತ್ತು ಅಜಯ್‌ಕುಮಾರ್ ಬಂಧಿತರು. ಇವರಲ್ಲದೆ, ಲಿಖಿತ ಪರೀಕ್ಷೆ ಬರೆದ ನಕಲಿ ಅಭ್ಯರ್ಥಿಗಳು ಸೇರಿ ಹಲವರ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.
    2023ರಲ್ಲಿ ಮಾರ್ಚ್ 9ರಂದು ರಾಷ್ಟ್ರೀಯ ಮಿಲಿಟರಿ ಕ್ಯಾಂಪ್‌ನಲ್ಲಿ ಖಾಲಿ ಇರುವ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಅತೀಶ್ ಮತ್ತು ಅಜಯ್ ಸಹ ಅರ್ಜಿ ಸಲ್ಲಿಸಿ ಡಿಮ್ಯಾಂಡ್ ಡ್ರ್ಟ್ ಮೂಲಕ ಶುಲ್ಕ ಪಾವತಿಸಿದ್ದರು. 2024ರ ಮಾರ್ಚ್ 24ರಂದು ಮಿಲಿಟರಿ ನೇಮಕಾತಿ ಆಯೋಗವು ಲಿಖಿತ ಪರೀಕ್ಷೆ ನಡೆಸಿತ್ತು. ಈ ವೇಳೆ ಅಭ್ಯರ್ಥಿಗಳ ಹೆಸರಿನ ನಕಲಿ ಆಧಾರ್ ಕಾರ್ಡ್ ತೋರಿಸಿ ಪರೀಕ್ಷೆ ಬರೆದು ಹೋಗಿದ್ದರು. ಮಾರ್ಚ್ 30ರಂದು ಕೌಶಲ ಪರೀಕ್ಷೆಗೆ ಅಸಲಿ ಅಭ್ಯರ್ಥಿಗಳು ಹಾಜರಾಗಿದ್ದರು.

    ಲಿಖಿತ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಬೆರಳಚ್ಚಿಗೂ ಇವರ ಬೆರಳಚ್ಚಿಗೂ ಹೋಲಿಕೆ ಮಾಡಿದಾಗ ವ್ಯತ್ಯಾಸ ಕಂಡುಬಂದಿದ್ದು, ತೀವ್ರ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಅಧಿಕಾರಿ ಸುಮಿತ್ ಧಿಮನ್, ಅಶೋಕನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇಬ್ಬರ ಅಭ್ಯರ್ಥಿಗಳನ್ನು ವಶಕ್ಕೆ ಪಡೆದಿದ್ದು, ಉಳಿದವರ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts