More

    18 ಸಾವಿರ ಮಂದಿಯನ್ನ ಕೆಲಸದಿಂದ ವಜಾ ಮಾಡುವುದಾಗಿ ಅಮೆಜಾನ್​ ಘೋಷಣೆ! ಉದ್ಯೋಗಿಗಳಲ್ಲಿ ಆತಂಕ

    ನವದೆಹಲಿ: ಇ ಕಾಮರ್ಸ್(E commerce)​ ದೈತ್ಯ ಕಂಪನಿ ಅಮೆಜಾನ್(Amazon)​ 18,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಸಜ್ಜಾಗಿದ್ದು, ಸಿಬ್ಬಂದಿಯಲ್ಲಿ ಆತಂಕ ಶರುವಾಗಿದೆ.

    ಆರ್ಥಿಕ ನಷ್ಟ ಸರಿದೂಗಿಸಲು ಕಳೆದ ವರ್ಷ ನವೆಂಬರ್​ನಲ್ಲಿ 10 ಸಾವಿರ ಉದ್ಯೋಗಿಗಳನ್ನು ಕಡಿತ ಮಾಡುವುದಾಗಿ ಘೋಷಿಸಿತ್ತು. ಈ ಸರಣಿ ಮುಂದುವರಿದಿದ್ದು, ಇದೀಗ ಒಟ್ಟು 18 ಸಾವಿರ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ. ವಿಶ್ವದಾದ್ಯಂತ ಸುಮಾರು 1.5 ಮಿಲಿಯನ್​ ಉದ್ಯೋಗಿಗಳು ಅಮೆಜಾನ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

    ಮೆಟಾ, ಟ್ವಿಟರ್​, ಜೊಮ್ಯಾಟೊದಲ್ಲೂ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಾರ್ಪೋರೇಟ್ ಸಂಸ್ಥೆಗಳಲ್ಲಿನ ಜಾಬ್​ಕಟ್​ ಟ್ರೆಂಡ್​ ಮತ್ತಷ್ಟು ಮುಂದುವರಿದಿದ್ದು, ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ. ಈ ತಿಂಗಳು ಉದ್ಯೋಗ ಕಡಿತ ಸಂಖ್ಯೆ 18,000ಕ್ಕೆ ತಲುಪಿದೆ. ಇದಕ್ಕೆ “ಅನಿಶ್ಚಿತ ಆರ್ಥಿಕತೆ” ಕಾರಣ ಎಂದು ಅಮೆಜಾನ್​ ಸಿಇಒ ಆಂಡಿ ಜಾಸ್ಸಿ ಸಂದೇಶ ರವಾನಿಸಿದ್ದಾರೆ.

    ಉದ್ಯೋಗ ಕಳೆದುಕೊಳ್ಳುತ್ತಿರುವವರು ಹೆಚ್ಚಿನವರು ಯೂರೋಪ್​ನವರು. ಅಮೆಜಾನ್​ ಸಂಸ್ಥೆಯು ಹೆಚ್ಚು ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ. ಅಲ್ಲದೆ ಕಳೆದ 2 ವರ್ಷದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನ ನೇಮಕ ಮಾಡಿಕೊಂಡಿದ್ದರಿಂದ ಮತ್ತಷ್ಟು ನಷ್ಟ ಉಂಟಾಗಿದೆ. ಹಾಗಾಗಿ ಉದ್ಯೋಗ ಕಡಿತ ಅನಿವಾರ್ಯ ಎಂದು ಸಂಸ್ಥೆಯು ತಿಳಿಸಿದೆ. ಉದ್ಯೋಗದಿಂದ ವಜಾಗೊಳ್ಳುವ ಸಿಬ್ಬಂದಿ ಜತೆ ಜ.18ರಂದು ಸಭೆ ನಡೆಸಲಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. (ಏಜೆನ್ಸೀಸ್​)

    ಆನೇಕಲ್​ನಲ್ಲಿ ಈ ನಾಗರಹಾವಿನ ನಡೆಯೇ ವಿಚಿತ್ರ-ವಿಸ್ಮಯ! ಹಾವು ನೋಡಲು ಜನವೋ ಜನ

    ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಹಾವೇರಿಗೆ ಇಂದಿನಿಂದ ವಿಶೇಷ ರೈಲು ಸಂಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts