More

    ಸ್ಮಶಾನದಲ್ಲೂ ಹೌಸ್​ಫುಲ್ ಬೋರ್ಡ್! ಶವಗಳ ಹೊತ್ತು ಕ್ಯೂ ನಿಂತ ಆಂಬುಲೆನ್ಸ್

    ಬೆಂಗಳೂರು: ಸಿನಿಮಾ ಥಿಯೇಟರ್​ಗಳ ಮುಂದೆ ಕಂಡು ಬರುತ್ತಿದ್ದ ಹೌಸ್​ಫುಲ್ ಬೋರ್ಡ್ ಇದೀಗ ಸ್ಮಶಾನಕ್ಕೂ ಕಾಲಿಟ್ಟಿದೆ!

    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್​ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತರ ಅಂತ್ಯಕ್ರಿಯೆಗೆ ಪರದಾಡುವಂತಾಗಿದೆ. ಚಿತಾಗಾರಗಳ ಮುಂದೆ ಶವಗಳನ್ನು ಹೊತ್ತು ತಂದ ಆಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ. ಇದೀಗ ಚಿತ್ರಮಂದಿರಗಳಂತೆ ಚಿತಾಗಾರಗಳಲ್ಲೂ ‘ಹೌಸ್ ಫುಲ್​’ ಬೋರ್ಡ್​ ಹಾಕುತ್ತಿರುವುದು ಮೃತರ ಕುಟುಂಬಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸುತ್ತಿದೆ.

    ಚಾಮರಾಜಪೇಟೆಯ ಟಿಆರ್​ ಮಿಲ್​ ಸಮೀಪದ ಸ್ಮಶಾನದ ಗೇಟ್​​ನಲ್ಲಿ ಹೌಸ್ ಫುಲ್​ ಬೋರ್ಡ್​ ನೇತಾಡುತ್ತಿದ್ದ ದೃಶ್ಯ ಸೋಮವಾರ ಕಂಡು ಬಂತು. ಇಂದು 19 ಮೃತದೇಹಗಳ ದಹನಕ್ಕೆ ಬುಕಿಂಗ್ ಆಗಿದೆ. ಇಲ್ಲಿ ದಿನಕ್ಕೆ 20 ಶವಗಳ ಅಂತ್ಯಕ್ರಿಯೆಗೆ ಅವಕಾಶ ಇದೆ. ಈಗಾಗಲೇ ಮೃತದೇಹ ದಹನದ ಬುಕಿಂಗ್ ಕಂಪ್ಲೀಟ್ ಆಗಿರುವ ಹಿನ್ನೆಲೆ ಚಿತಾಗಾರದ ಸಿಬ್ಬಂದಿ ಹೌಸ್ ಫುಲ್ ಬೋರ್ಡ್ ಹಾಕಿದ್ದಾರೆ.

    ಇತ್ತ ಮಾಗಡಿ ರಸ್ತೆಯ ತಾವರೆಕೆರೆಯಲ್ಲಿ ಬಯಲು ಚಿತಾಗಾರದ ಮುಂದೆ ಶವ ಹೊತ್ತು ತಂದ ಆಂಬುಲೆನ್ಸ್​ಗಳು ಸಾಲುಗಟ್ಟಿ ನಿಂತಿವೆ. ಈಗಾಗಲೇ 43 ಮೃತದೇಹಗಳ ಅಂತ್ಯಸಂಸ್ಕಾರ ಆಗಿದೆ. 50 ಶವಗಳ ಅಂತ್ಯಸಂಸ್ಕಾರಕ್ಕೆ ಸಿಬ್ಬಂದಿ ಟೋಕನ್ ವ್ಯವಸ್ಥೆ ಕಲ್ಪಿಸಿದ್ದಾರೆ. ಒಟ್ಟಾರೆ ಇಂದು 58 ಮೃತದೇಹ ಅಂತ್ಯಸಂಸ್ಕಾರ ಮಾಡಲಷ್ಟೆ ಸಾಧ್ಯ.

    ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

    ಈ ಸರ್ಕಾರವನ್ನ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ, ಬರೆದಿಟ್ಟುಕೊಳ್ಳಿ: ಸಿಎಂ ವಿರುದ್ಧ ಏಕವಚನದಲ್ಲೇ ಶಾಸಕ ವಾಗ್ದಾಳಿ

    ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

    ಅರೇ, ಹೀಗೂ ಮದ್ವೆ ಆಗ್ಬೋದು! ಕರೊನಾ ಟೈಮಲ್ಲಿ ಸಖತ್​ ವೈರಲ್​ ಆಗ್ತಿದೆ ಈ ಜೋಡಿಯ ಮದ್ವೆ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts