More

    ಈ ಸರ್ಕಾರವನ್ನ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ, ಬರೆದಿಟ್ಟುಕೊಳ್ಳಿ: ಸಿಎಂ ವಿರುದ್ಧ ಏಕವಚನದಲ್ಲೇ ಶಾಸಕ ವಾಗ್ದಾಳಿ

    ಮಂಡ್ಯ: ‘ಸರ್ಕಾರವನ್ನ ನಂಬಿದ್ರೆ ನಮ್ಮೆಲ್ಲರ ತಿಥಿ ಆಗುತ್ತೆ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಆಕ್ರೋಶ ಹೋರಹಾಕಿದ್ದಾರೆ.

    ಸಚಿವರ ಕ್ಷೇತ್ರ ಕೆ.ಆರ್.ಪೇಟೆಯ ಆಸ್ಪತ್ರೆಯಲ್ಲೇ ಆಕ್ಸಿಜನ್ ಇಲ್ಲ. ಇನ್ನು ಸಚಿವರು ಎಲ್ಲಿಂದ ತರುತ್ತಾರೆ? ಈ ಸರ್ಕಾರ ನಮ್ಮನ್ನು ಉಳಿಸಿಕೊಳ್ಳುತ್ತೆ ಅಂದುಕೊಂಡಿದ್ದರೆ, ಅದು ನಮ್ಮೆಲ್ಲರ ತಿಥಿ ಆಗುತ್ತೆ ಎಂದರ್ಥ. ಇದನ್ನು ಬರೆದಿಟ್ಟುಕೊಳ್ಳಿ. ಅವನ್ಯಾವನೋ ಆರೋಗ್ಯ ಮಂತ್ರಿ ಒಂದೇಳುತ್ತಾನೆ. ಮುಖ್ಯಮಂತ್ರಿ ಒಂದೇಳುತ್ತಾನೆ. ಇವರ್ಯಾರೂ ಸರಿಯಾದ ಮಾಹಿತಿಯನ್ನ ಜನರಿಗೆ ನೀಡುತ್ತಿಲ್ಲ ಎಂದು ಏಕವಚನದಲ್ಲೇ ಪುಟ್ಟರಾಜು ವಾಗ್ದಾಳಿ ನಡೆಸಿದರು.

    ನಿನ್ನೆ ಸಂಜೆಯೇ ಆಕ್ಸಿಜನ್ ಒದಗಿಸುವ ಭರವಸೆ ನೀಡಿದ್ರಿ. ಮಾತು ಕೊಟ್ಟಂತೆ ಇಂದು ಮಧ್ಯಾಹ್ನದೊಳಗೆ ಕಳಿಸಿ. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ನೀವೇ ಬೆಲೆ ತೆತ್ತಬೇಕಾಗುತ್ತೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪುಟ್ಟರಾಜು ಎಚ್ಚರಿಸಿದರು.

    ಮೂರು ಜಿಲ್ಲೆ ಪರವಾಗಿ ನನ್ನ ಮನವಿ. ಮೈಸೂರು ಜಿಲ್ಲೆಗೆ ಬೇಕಾದಷ್ಟು ಆಕ್ಸಿಜನ್ ಇಟ್ಟುಕೊಂಡು ಬಾಕಿ ಇರುವುದನ್ನ ಮಂಡ್ಯ, ಚಾಮರಾಜನಗರಕ್ಕೆ ನೀಡಿ ಎಂದು ಮೈಸೂರು ಜಿಲ್ಲಾಧಿಕಾರಿಯನ್ನ ಆಗ್ರಹಿಸಿದ ಪುಟ್ಟರಾಜು, ಮಂಡ್ಯ ಸಂಸದರಿಗೂ ಮನವಿ ಮಾಡಿದರು. ಮಂಡ್ಯ ಸಂಸದರು ಪ್ರಭಾವಿ ನಾಯಕರು. ತಕ್ಷಣ ತಮ್ಮ ಪ್ರಭಾವ ಬಳಸಿ ಸರ್ಕಾರದಿಂದ ಆಕ್ಸಿಜನ್ ಕೊಡಿಸುವ ವ್ಯವಸ್ಥೆ ಮಾಡಲಿ ಎಂದರು.

    ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

    ನಿನ್ನೆ ಹಸೆಮಣೆಗೇರಿದ್ದ ಮದುಮಗ ಇಂದು ಕರೊನಾಗೆ ಬಲಿ! ಮನಕಲಕುತ್ತೆ ಈ ಘಟನೆ

    ಚಾಮರಾಜನಗರದಲ್ಲಿ 24 ಮಂದಿ ಸಾವು: ರೋಹಿಣಿ ಸಿಂಧೂರಿ ವಿರುದ್ಧ ಸಿಎಂ ಯಡಿಯೂರಪ್ಪ ಗರಂ

    ಕರೊನಾ ಹಿನ್ನೆಲೆ ಕೂಲಿ ಸಿಗ್ತಿಲ್ಲ, ಸಾಲ ತೀರಿಸೋಕೆ 3 ತಿಂಗಳು ಟೈಂ ಕೊಡಿ…ಇಲ್ಲಾಂದ್ರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ತೀವಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts