ಉತ್ತಮ ಸಂಸ್ಕಾರದಿಂದ ಸ್ವಸ್ಥ ಸಮಾಜ

Kdb_Good Culture
Published on

ಕಡಬ: ಪುಣ್ಚಪ್ಪಾಡಿ ಸಮರ್ಥ ಜನ ಸೇವಾ ಟ್ರಸ್ಟ್ ವತಿಯಿಂದ ಬಾಲ ಗೋಕುಲ ಶಿಬಿರ ಪುಣ್ಚಪ್ಪಾಡಿಯಲ್ಲಿ ನಡೆಯಿತು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ ಉದ್ಘಾಟಿಸಿ ಮಾತನಾಡಿ, ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಆಗ ಒಳ್ಳೆಯ ಸಮಾಜ ಮೂಡಿ ಬರಲು ಸಾಧ್ಯ ಎಂದರು.

ಚಿತ್ರ ಕಲಾವಿದ ನಾಗರಾಜ ನಿಡ್ವಣ್ಣಾಯ ಮಾತನಾಡಿ, ಶಿಬಿರ ಮೂಲಕ ಮೌಲ್ಯಯುತ ಜ್ಞಾನದ ಅರಿವು ಮೂಡಲು ಸಾಧ್ಯವಿದೆ. ಪಾಲಕರು ಇಂತಹ ಶಿಬಿರದಲ್ಲಿ ಮಕ್ಕಳನ್ನು ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದರು.

ಅಧ್ಯಕ್ಷತೆಯನ್ನು ಸಮರ್ಥ ಜನ ಸೇವಾ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ ಸುಲಾಯ ವಹಿಸಿದ್ದರು. ಸವಣೂರು ಗ್ರಾ.ಪಂ. ಉಪಾಧ್ಯಕ್ಷ ಜಯಶ್ರೀ ಕುಚ್ಚೆಜಾಲು, ಗ್ರಾಪಂ ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ವಿಶಾಲ ಓಂತಿಮನೆ ಉಪಸ್ಥಿತರಿದ್ದರು. ಸಮರ್ಥ ಜನ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಮಹೇಶ್ ಕೆ.ಸವಣೂರು ಸ್ವಾಗತಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net