ಆಲಸ್ಯದಿಂದ ಮುಕ್ತರಾದಲ್ಲಿ ಆರೋಗ್ಯಯುಕ್ತ ಜೀವನ

Published on

ಕುಂದಾಪುರ: ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಹಾರದ ಬಗ್ಗೆ ಮಾಹಿತಿ ಒದಗಿಸುವ ಶುಗರ್ ಬೋರ್ಡ್ ಕಾರ್ಯಕ್ರಮ ಬುಧವಾರ ನಡೆಯಿತು.

ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮಕ್ಕಳ ತಜ್ಞ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಕೌಶಿಕ್ ಎಚ್.ಮಾತನಾಡುತ್ತಾ, ಪ್ರತಿ 20 ಜನ ಮಕ್ಕಳಲ್ಲಿ ಒಬ್ಬರ ತೂಕ ವಯಸ್ಸಿಗೆ ಮೀರಿ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿ ಮತ್ತು ಆಹಾರವೇ ಕಾರಣವಾಗಿರುತ್ತದೆ. ಆಲಸ್ಯವೂ ತೂಕದ ಹೆಚ್ಚುವಿಕೆಗೆ ಪ್ರಧಾನ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಪಾಠವನ್ನು ಆಲಿಸುವ ಕೆಲಸದಲ್ಲೇ ಸಮಯವನ್ನು ಕಳೆಯುವುದರಿಂದ ದೇಹದ ಅಂಗಾಂಗಗಳು ಬಹಳ ಚಟುವಟಿಕೆಯಿಂದ ಕೂಡಿರುವುದಿಲ್ಲ. ಆದ್ದರಿಂದ ದಿನಕ್ಕೊಂದು ಘಂಟೆಯಾದರೂ ಓಟ, ಆಟ, ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಮಾತ್ರ ಆಲಸ್ಯದಿಂದ ಮುಕ್ತರಾಗಿ ಆರೋಗ್ಯ ಹೊಂದಬಹುದು ಎಂದು ಹೇಳಿದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲ ಶರಣ ಕುಮಾರ, ಶಾಲೆಯ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕರು ಹಾಗೂ ಶಿಕ್ಷಕೇತರರು ಉಪಸ್ಥಿತರಿದ್ದರು. 

ವಿದ್ಯಾರ್ಥಿನಿಯರಾದ ಕೃಪಾಲಿ ಸ್ವಾಗತಿಸಿದರು. ಆರ್.ಲಹರಿ ನಿರೂಪಿಸಿದರು. ವಿದ್ಯಾರ್ಥಿ ಚಿದಾನಂದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net