ಕುಮಾರಸ್ವಾಮಿ ಅವರನ್ನ ನೇರ ಭೇಟಿ ಆಗ್ಬೇಕಂದ್ರೆ ಹೀಗೆ ಮಾಡಿ... ಸಾರ್ವಜನಿಕರಿಗಾಗಿ ಸ್ಥಳ-ಸಮಯ ಮೀಸಲಿದೆ...

hdk
Published on

ಬೆಂಗಳೂರು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಕಾಯುತ್ತಿರುವ ಅಭಿಮಾನಿಗಳು, ಜೆಡಿಎಸ್​ ಪಕ್ಷದ ಕಾರ್ಯಕರ್ತರು, ಮುಖಂಡರು, ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ. ಯಾವ ಸಮಯದಲ್ಲಿ? ಎಲ್ಲಿ ಸಿಗುತ್ತಾರೆ? ಎಂದು ಸ್ವತಃ ಎಚ್​ಡಿಕೆ ಅವರೇ ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಸಮೀಪ ಇರುವ ಕೇತಗಾನಹಳ್ಳಿಯ ನನ್ನ ತೋಟದ ಮನೆಯಲ್ಲಿ ಕಳೆದ ಆರು ತಿಂಗಳಿಂದ ವಾಸ್ತವ್ಯ ಹೂಡಿದ್ದೇನೆ. ನನ್ನ ಹೊಲ ಮತ್ತು ತೋಟದ ಕೃಷಿಯನ್ನು ಇಸ್ರೇಲ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇನೆ. ನನ್ನ ಭೇಟಿಗೆ ರಾಜ್ಯದ ನಾನಾ ಭಾಗಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಗಮಿಸುತ್ತಿದ್ದಾರೆ. ಈ ಮೂಲಕ ‌ನನ್ನ ವಿನಮ್ರ ಮನವಿಯೆಂದರೆ, ಬೆಳಗ್ಗೆ 8.30 ರಿಂದ 10.30 ಗಂಟೆಯವರೆಗೆ ನನ್ನ ತೋಟದ ಮನೆಯಲ್ಲಿ ಭೇಟಿಯಾಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಭಾನುವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಬೆಳಗ್ಗೆ 8.30ರಿಂದ 10.30ರ ವರೆಗೆ ಬಂದು ನನ್ನನ್ನು ಭೇಟಿ ಮಾಡಬಹುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಸಾರ್ಜನಿಕರು ನನ್ನನ್ನು ಭೇಟಿ ಮಾಡುವ ಸದುದ್ದೇಶಕ್ಕಾಗಿಯೇ ನನ್ನ ತೋಟದ ಮನೆಯಲ್ಲಿ ಪುಟ್ಟ ಕಚೇರಿಯೊಂದನ್ನು ಆರಂಭಿಸಿದ್ದೇನೆ. ಈ ಕಚೇರಿಗೆ ಇಂದು (ಸೋಮವಾರ) ಔಪಚಾರಿಕವಾಗಿ ಪೂಜೆ ನೆರವೇರಿಸಿದ್ದೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net