

ರಾಯಚೂರು ಸರ್ಕಾರಿ ನೌಕರರು ಒತ್ತಡದ ಮಧ್ಯೆಯು ಉತ್ಸಾಹದಿಂದ ಕೆಲಸ ಮಾಡುವ ಪ್ರವೃತ್ತಿಯನ್ನು ಮೈಗೊಡಿಸಿಕೊಳ್ಳಬೇಕೆಂದು ಜಿಪಂ ಸಿಇಓ ರಾಹುಲ್ ತುಕರಾಂ ಪಾಂಡ್ವೆ ಅವರು ಹೇಳಿದರು.
ನಗರದ ಕೃಷಿ ವಿವಿಯ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ ಸಂಜೆ ಆಯೋಜನೆ ಮಾಡಲಾಗಿದ್ದ, ೨೦೨೪-೨೫ನೇ ಸಾಲಿನ ನೌಕರರ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಕ್ರೀಡೆಯಲ್ಲಿರುವ ನಿಮ್ಮ ಉತ್ಸಾಹ ಕೆಲಸದಲ್ಲಿಯು ತೊಡಗಿಸಿಕೊಳ್ಳಬೇಕು. ಅಽಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪ್ರತಿ ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ನಿಮ್ಮನ್ನು ನೀವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ, ಮಾನಸಿಕವಾಗಿ ಆರೋಗ್ಯವನ್ನು ಸದೃಢರನ್ನಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಕಳೆದ ಎರಡು ದಿನಗಳ ಕಾಲ ವಿವಿಧ ಸ್ಪರ್ಧೇಗಳಲ್ಲಿ ಭಾಗವಹಿಸಿ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಸಹಕಾರಿಯಾಗಿದೆ. ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಿದ ಜಿ.ಪಂ ಅಽಕಾರಿಗಳಿಗೆ ಹಾಗೂ ವಿವಿಧ ತಾಲೂಕ ಕಾರ್ಯನಿರ್ವಾಹಕ ಅಽಕಾರಿಗಳು, ಸಹಾಯಕ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ, ಯೋಜನಾ ಅಽಕಾರಿ ಶರಣಬಸವರಾಜ, ಮುಖ್ಯ ಯೋಜನಾಽಕಾರಿ ಡಾ.ಟಿ.ರೋಣಿ, ಮುಖ್ಯ ಲೆಕ್ಕಾಽಕಾರಿಗಳಾದ ವಿಜಯಶಂಕರ ಸೇರಿದಂತೆ ಅನೇಕರು ಇದ್ದರು.