ಮುಳ್ಳೂರಿನಲ್ಲಿ ವಿಜೃಂಭಣೆಯ ಗಣೇಶೋತ್ಸವ; ಅರವಿಂದ ಲಿಂಬಾವಳಿ ವಿಶೇಷ ಪೂಜೆ

mpura
Published on

ಮಹದೇವಪುರ: ಮಹದೇವಪುರ ಕ್ಷೇತ್ರವ್ಯಾಪ್ತಿಯ ಮುಳ್ಳೂರು ಗ್ರಾಮದ ಶ್ರೀವಿನಾಯಕ ಯುವಕರ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು. ಈ ವೇಳೆ ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀವಿನಾಯಕ ಯುವಕರ ಸಮಿತಿಯ ಸದಸ್ಯರು ಗಣೇಶನ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ವಿಸರ್ಜನೆ ಮಾಡಿದರು. ಸಂಜೆ ನಡೆದ ಸಮಂಜರಿ ಕಾರ್ಯಕ್ರಮವು ಜನರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಶ್ರೀಧರ ರೆಡ್ಡಿ, ಶ್ರೀನಿವಾಸ್ ರೆಡ್ಡಿ, ಭೂ ನ್ಯಾಯಮಂಡಲಿ ಮಾಜಿ ಸದಸ್ಯ ಮುನಿರಾಜು, ಮುಖಂಡರಾದ ಶ್ರೀನಿವಾಸ, ಮಹೇಶ್, ಮನೋಜ್, ನಿತಿನ್, ಶ್ರೇಯಾ, ರಕ್ಷಿತ್, ಸುಹಾಸ್, ನೈಶಾ ಹಾಗೂ ವಿನಾಯಕ ಯುವಕರ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net