More

    VIDEO| ವಿಶ್ವಕಪ್​ನಲ್ಲಿ ಅಮೋಘ ಫೀಲ್ಡಿಂಗ್​ಗಾಗಿ ಸ್ವರ್ಣ ಪದಕ ಗೆದ್ದ ವಿರಾಟ್​ ಕೊಹ್ಲಿ!

    ಚೆನ್ನೈ: ಕಳೆದ 2 ವಾರಗಳಿಂದ ಬರೀ ಪದಕಗಳದ್ದೇ ಸುದ್ದಿ. ಇದೀಗ ಕ್ರಿಕೆಟ್​ ವಿಶ್ವಕಪ್​ ಶುರುವಾದರೂ ಪದಕಗಳ ಸುದ್ದಿ ನಿಂತಿಲ್ಲ! ಹೌದು, ವಿರಾಟ್​ ಕೊಹ್ಲಿ ವಿಶ್ವಕಪ್​ನಲ್ಲಿ ಭಾರತದ ಮೊದಲ ಸ್ವರ್ಣ ಪದಕ ವಿಜೇತರಾಗಿದ್ದಾರೆ! ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿನ ಅದ್ಭುತ ಫೀಲ್ಡಿಂಗ್​ ನಿರ್ವಹಣೆಗಾಗಿ ಅವರಿಗೆ ಈ ಪದಕ ಲಭಿಸಿದೆ. ಪಂದ್ಯದ ಬಳಿಕ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ನಲ್ಲಿ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​, ಕೊಹ್ಲಿ ಕೊರಳಿಗೆ ಈ ಚಿನ್ನದ ಪದಕದ ಹಾರ ಹಾಕಿದರು. ಕೊಹ್ಲಿ ಪದಕವನ್ನು ಕಚ್ಚಿ ಸಂಭ್ರಮಿಸಿದರು. ವಿಶ್ವಕಪ್​ನಲ್ಲಿ ತಂಡದಿಂದ ಅದ್ಭುತ ಫೀಲ್ಡಿಂಗ್​ ನಿರ್ವಹಣೆ ಹೊರಹೊಮ್ಮಿಸಲು ಟೀಮ್​ ಇಂಡಿಯಾ, ಬೆಸ್ಟ್​ ಫೀಲ್ಡರ್​ಗೆ ಚಿನ್ನದ ಪದಕ ನೀಡುವ ಪರಿಪಾಠ ಆರಂಭಿಸಿದೆ.

    ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಪಂದ್ಯದಲ್ಲಿ ಕೇಸರಿ ಜೆರ್ಸಿ ಧರಿಸುವುದೇ ಟೀಮ್ ಇಂಡಿಯಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts