ಜುಲೈ 28 ರಂದು ಬೆಂಗಳೂರಿನಲ್ಲಿ ಮಂಗಳೂರಿನ ‘ಎ ಫ್ರೆಂಡ್ ಬಿಯೋಂಡ್ ದಿ ಫೆನ್ಸ್’ ನಾಟಕ ಪ್ರದರ್ಶನ

mng- july 26- A Friend
Published on

ಮಂಗಳೂರು : ನಗರದ ಕಲಾಭಿ ಥಿಯೇಟರ್ಸ್‌ನ ಕಲಾವಿದರು ಪ್ರದರ್ಶಿಸಿ ಜನಮೆಚ್ಚುಗೆಗಳಿಸಿದ ‘ಎ ಫ್ರೆಂಡ್ ಬಿಯೋಂಡ್ ದಿ. ಫೆನ್ಸ್’ ಕನ್ನಡ ನಾಟಕದ ಎರಡು ಪ್ರದರ್ಶನಗಳು ಬೆಂಗಳೂರು ಜೆ.ಪಿ.ನಗರದ ರಂಗಶಂಕರದಲ್ಲಿ ಜುಲೈ 28ರಂದು ಸಂಜೆ 3.30 ಮತ್ತು 7-30ಕ್ಕೆ ನಡೆಯಲಿವೆ.
ಶ್ರವಣ್ ಹೆಗ್ಗೊಡು ನಿರ್ದೇಶನದಲ್ಲಿ ನೀನಾಸಂ ಕಲಾವಿದರು ಹೊಸ ಸಂಚಲನ ಮೂಡಿಸಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡು ರಂಗಾಸಕ್ತರ ಮನಗೆದ್ದು, ಹೊಸ ಬಗೆಯ ನಾಟಕ ಎಂದು ಪ್ರಶಂಶಿಸಲ್ಪಟ್ಟಿದೆ.
ನಾಟಕದಲ್ಲಿ ನೈಜ ಗಾತ್ರದ ಆನೆ, ಜಪಾನ್ ಬರ್ನಾಕು ಗೊಂಬೆಗಳು ಹಾಗೂ ವಿಶೇಷ ತಂತ್ರಗಳು ಪ್ರೇಕ್ಷಕರನ್ನು ಆಕರ್ಷಿಸಲಿವೆ. ನೀನಾಸಂನ ಭುವನ್ ಮಣಿಪಾಲ್ ಮತ್ತು ಉಜ್ವಲ್ ತಮ್ಮ ತಂಡದೊಂದಿಗೆ ಅಭಿನಯಿಸಲಿದ್ದಾರೆ ಎಂದು ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net