ಶಾಲೆಯಲ್ಲಿ ವಿದ್ಯುತ್​ ಪ್ರವಹಿಸಿ ವಿದ್ಯಾರ್ಥಿನಿ ಸಾವು: ಮುಖ್ಯಶಿಕ್ಷಕ ಅಮಾನತು

New Project(29)
Published on

ಬೆಂಗಳೂರು: ವಿದ್ಯುತ್ ತಂತಿ ತಗುಲಿ ಶಾಲೆಯಲ್ಲೇ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಡೋಣೆವಾಡಿಯಲ್ಲಿ ಸಂಭವಿಸಿದೆ.

ಅನುಷ್ಕಾ ಸದಾಶಿವ ಬೆಂಡೆ(9) ಮೃತ ಬಾಲಕಿ. ಡೋಣೆವಾಡಿ ಗ್ರಾಮದ ಸರ್ಕಾರಿ ಮರಾಠಿ ಶಾಲೆಯಲ್ಲಿ ಓದುತ್ತಿದ್ದ ಅನುಷ್ಕಾ, ಸೋಮವಾರ ಬೆಳಗ್ಗೆ ಎಂದಿನಂತೆ ತರಗತಿಗೆ ಹಾಜರಾಗಿದ್ದಳು. ಶಾಲಾ ಶೌಚಗೃಹದ ಬಳಿ ಇರುವ ವಿದ್ಯುತ್​ ಕಂಬದಿಂದ ಸ್ಥಳೀಯರು ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಬಾಲಕಿ ಆಕಸ್ಮಿಕವಾಗಿ ವಿದ್ಯುತ್​ ತಂತಿ ಸ್ಪರ್ಶಿಸಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆ ನಡೆದ ವೇಳೆ ಮುಖ್ಯಶಿಕ್ಷಕ ಕುಮಾರ್ ನಾಟೇಕರ್ ಶಾಲೆಯಲ್ಲಿ ಇರಲಿಲ್ಲ. ಶಾಲೆಗೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಹಾಕಿ ಹೊರ ಹೋಗಿದ್ದರು. ಮುಖ್ಯಶಿಕ್ಷಕನ ಬೇಜವಾಬ್ದಾರಿಯಿಂದಲೇ ಬಾಲಕಿ ಸಾವಾಗಿದೆ ಎಂದು ಸ್ಥಳೀಯರು ಶಾಲಾ ಆಡಳಿತ ಮಂಡಳಿ ಹಾಗೂ ಬಿಇಒಗೆ ತರಾಟೆ ತೆಗೆದುಕೊಂಡರು. ಮುಖ್ಯಶಿಕ್ಷಕನನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ. ಸದಲಗಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net